ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ರೈತರು ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡು ದಶಕ ಕಳೆದರೂ ಪರಿಹಾರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡ ರೈತರು, ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಮತ್ತು ಎಡಿಸಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ. 12 ಕೋಟಿಗೂ ಅಧಿಕ ಪರಿಹಾರ ನೀಡಲು ಸರ್ಕಾರ ವಿಳಂಬ ಮಾಡಿದ್ದು, ರೈತರ ಅಸಮಾಧಾನ ತೀವ್ರಗೊಂಡಿದೆ.
ಗದಗ, ಸೆಪ್ಟೆಂಬರ್ 23: ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರು ಸಿಡಿದೆದಿದ್ದಾರೆ. ದಶಕಗಳು ಕಳೆದರೂ ಪರಿಹಾರ ಸಿಗದ ಹಿನ್ನೆಲೆ ನ್ಯಾಯಾಲಯದ ಆದೇಶದ ಮೇರೆಗೆ ಗದಗ ಜಿಲ್ಲಾಧಿಕಾರಿ ಮತ್ತು ಎಡಿಸಿ ಕಾರುಗಳನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ, ತಾಮ್ರಗುಂಡಿ ಸೇರಿದಂತೆ ಹಲವು ಗ್ರಾಮದ ರೈತರು ಯೋಜನೆಗೆ ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ದಶಕಗಳು ಕಳೆದರೂ ಪರಿಹಾರ ನೀಡಿದ ಸರ್ಕಾರದ ವಿರುದ್ಧ ರೈತರು ಕೋರ್ಟ್ ಮೆಟ್ಟಿಲೆರಿದ್ದರು. 14 ಪ್ರಕರಣದಲ್ಲಿ 12 ಕೋಟಿಗೂ ಅಧಿಕ ಪರಿಹಾರ ಬರಬೇಕಾಗಿದೆ. ಒಂದು ಎಕರೆಗೆ 40 ರಿಂದ 60 ಲಕ್ಷ ರೂ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾಡಳಿತದಲ್ಲಿ ಪೀಠೋಪಕರಣ ಹಾಗೂ ಕಾರು ಜಪ್ತಿ ಮಾಡಿದ್ದಾರೆ. ಹತ್ತು ವರ್ಷವಾದರೂ ಸರ್ಕಾರ ಪರಿಹಾರ ನೀಡಿಲ್ಲ. ಭೀಕರ ಬರಗಾಲ ಆವರಿಸಿದೆ, ಈಗಲಾದರೂ ಪರಿಹಾರ ನೀಡಬೇಕಾಗಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us