AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ರಿಪೋರ್ಟ್ ಇಂಪ್ಯಾಕ್ಟ್: ಗದಗದಲ್ಲಿ 5 ದಿನಗಳಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆ ಓಪನ್!

ಟಿವಿ9 ರಿಪೋರ್ಟ್ ಇಂಪ್ಯಾಕ್ಟ್: ಗದಗದಲ್ಲಿ 5 ದಿನಗಳಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆ ಓಪನ್!

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Aug 26, 2026 | 11:58 AM

Share

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಕೆಂಚಲಾಪೂರ ಸರ್ಕಾರಿ ಶಾಲೆ ಕಳೆದ ಐದು ದಿನಗಳಿಂದ ಬಂದ್ ಆಗಿದ್ದ ಪ್ರಕರಣದಲ್ಲಿ ಟಿವಿ ವರದಿ ಬಿತ್ತರವಾದ ಬೆನ್ನಲ್ಲೇ ಶಾಲೆ ಪುನಃ ಆರಂಭಗೊಂಡಿದೆ. ಇಂದು ಐದು ಮಕ್ಕಳು ಶಾಲೆಗೆ ಬಂದಿದ್ದು, ಶಿಕ್ಷಣ ಇಲಾಖೆಯ ಯಡವಟ್ಟು ಹಾಗೂ ಅಧಿಕಾರಿಗಳ ಸುಳ್ಳು ಕಥೆಗಳ ವಿರುದ್ಧ ಪೋಷಕರು ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಗದಗ, ಆಗಸ್ಟ್ 26: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪೂರ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಿಕ್ಷಕರು ಕಳೆದ ಐದು ದಿನಗಳಿಂದ ಬಂದ್ ಮಾಡಿದ್ದರು. ಈ ಬಗ್ಗೆ ಟಿವಿ ವರದಿ ಬಿತ್ತರವಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಶಾಲೆಯನ್ನು ಪುನಃ ಆರಂಭಿಸಿದೆ. ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪ ಹೇಳಿ ಬೀಗ ಜಡಿಯಲಾಗಿತ್ತು, ಆದರೆ ವರದಿ ಬಿತ್ತರಗೊಂಡ ಬೆನ್ನಲ್ಲೇ ಇಂದು 5 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ.

ಅಧಿಕಾರಿಗಳು ತಪ್ಪು ಮುಚ್ಚಿಕೊಳ್ಳಲು ಶಿಕ್ಷಕರು ‘SIR’ ಕಾರ್ಯದಲ್ಲಿದ್ದರು ಹಾಗೂ ಪೋಷಕರೇ ಟಿಸಿ ತೆಗೆದುಕೊಂಡು ಹೋಗಿದ್ದರು ಎಂದು ಕಥೆ ಕಟ್ಟಿದ್ದಾರೆ. ಆದರೆ “ಶಾಲೆಗೆ ಬೀಗ ಹಾಕಿ SIR ಕೆಲಸ ಮಾಡುವಂತಿಲ್ಲ” ಎಂದು ಗದಗ ಎಸಿ ಗಂಗಪ್ಪ ಸ್ಪಷ್ಟನೆ ನೀಡಿದ್ದಾರೆ. ಬಂದ್ ಉದ್ದೇಶವಿಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ತಿಳಿಸಿದ್ದು, ತನಿಖೆಗೆ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us