ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಭರ್ಜರಿ ತಯಾರಿ, ಖರೀದಿಗಳಿಗೆ ಕೆಆರ್ ಮಾರ್ಕೆಟ್ ನಲ್ಲಿ ಜನಸಾಗರ

|

Updated on: Sep 18, 2023 | 10:24 AM

ಇವತ್ತು ಕೂಡ ಅಪಾರ ಪ್ರಮಾಣದಲ್ಲಿ ಜನ ಹೂವು-ಹಣ್ಣು ಮತ್ತು ಹಬ್ಬದೂಟಕ್ಕೆ ಬೇಕಾಗುವ ಪದಾರ್ಥಗಳನನ್ನು ಕೊಳ್ಳಲು ನಗರದ ಕೆಆರ್ ಮಾರ್ಕೆಟ್ ಗೆ ಆಗಮಿಸಿದ್ದಾರೆ. ಮಾರ್ಕೆಟ್ ನಲ್ಲಿರುವ ಜನರನ್ನು ನೋಡುತ್ತಿದ್ದರೆ ಯಾವುದೋ ರಥೋತ್ಸವ ನಡೆಯುತ್ತಿದೆ ಅಂತ ಭಾಸವಾಗುತ್ತದೆ. ಅಷ್ಟೊಂದು ಜನರನ್ನು ಕಾಣಬಹುದು.

ಬೆಂಗಳೂರು: ಇಂದು ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ (Gowri-Ganesh Festival) ಸಂಭ್ರಮ. ನಗರದ ನಿವಾಸಿಗಳು (residents) ಮನೆಗಳಲ್ಲಿ ಮತ್ತು ಯುವಕರು ತಮ್ಮ ತಮ್ಮ ಏರಿಯಾಗಳಲ್ಲಿ ವಿಘ್ನೇಶ್ವರನ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಮೂರರಿಂದ ಒಂಭತ್ತು ದಿನಗಳ ಕಾಲ ಗಣೇಶ ಉತ್ಸವ (Ganesh Utsav) ನಡೆಯಲಿದೆ. ಗಣೇಶನ ವಿಗ್ರಹ ಹೂವು-ಹಣ್ಣು ಮತ್ತು ಎಲ್ಲ ಪೂಜಾ ಸಾಮಗ್ರಿಗಳನ್ನು ರವಿವಾರವೇ ಅನೇಕ ಜನ ಖರೀದಿ ಮಾಡಿದ್ದಾರೆ. ಆದರೆ ಇವತ್ತು ಕೂಡ ಅಪಾರ ಪ್ರಮಾಣದಲ್ಲಿ ಜನ ಹೂವು-ಹಣ್ಣು ಮತ್ತು ಹಬ್ಬದೂಟಕ್ಕೆ ಬೇಕಾಗುವ ಪದಾರ್ಥಗಳನನ್ನು ಕೊಳ್ಳಲು ನಗರದ ಕೆಆರ್ ಮಾರ್ಕೆಟ್ ಗೆ ಆಗಮಿಸಿದ್ದಾರೆ. ಮಾರ್ಕೆಟ್ ನಲ್ಲಿರುವ ಜನರನ್ನು ನೋಡುತ್ತಿದ್ದರೆ ಯಾವುದೋ ರಥೋತ್ಸವ ನಡೆಯುತ್ತಿದೆ ಅಂತ ಭಾಸವಾಗುತ್ತದೆ. ಅಷ್ಟೊಂದು ಜನರನ್ನು ಕಾಣಬಹುದು. ಟಿವಿ9 ಕನ್ನಡ ವಾಹಿನಿಯ ಕೆಮೆರಾಮನ್ ಮಾರ್ಕೆಟ್ ಮೇಲಿಂದ ದೃಶ್ಯಗಳನ್ನು ಸೆರೆಹಿಡಿದು ಒಂದು ವಿಹಂಗಮ ನೋಟವನ್ನು ಒದಗಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on