ಮೈಸೂರಲ್ಲಿ ಗ್ಯಾಸ್ ಲೀಕ್ ವಂದತಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮೈಸೂರಲ್ಲಿ ಗ್ಯಾಸ್ ಲೀಕ್ ಆಗಿದೆ ಎಂದು ವಂದತಿ ಎದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮೈಸೂರು: ನಗರದಲ್ಲಿ ಗ್ಯಾಸ್ ಲೀಕ್ ಆಗಿದೆ ಎಂದು ವಂದತಿ ಎದ್ದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಕರಿತು ಮಾತನಾಡಿದ ಹೆಚ್ಪಿ ಘಟಕದ ಸೀನಿಯರ್ ಮ್ಯಾನೇಜರ್ ಶಿವರಾಜ್ ಇದು ಗ್ಯಾಸ್ ಲೀಕ್ ಅಲ್ಲ ಬೆಂಕಿ ಅನಾಹುತದ ಸುರಕ್ಷಿತಾ ಪರೀಕ್ಷೆ. ಆಕಾಶದಲ್ಲಿ ಚಿಮ್ಮಿರುವುದು ಗ್ಯಾಸ್ ಅಲ್ಲ ನೀರು. ಇದರಿಂದ ಯಾವುದೇ ಅಪಾಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡದ ವೇಳೆ ಯಾವ ರೀತಿಯಾಗಿ ಸುರಕ್ಷತೆ ಕೈಗೊಳ್ಳಬೇಕೆಂದು ಅಣಕು ಪ್ರದರ್ಶನ ನಡೆಯುತ್ತಿತ್ತು. ಈ ಅಣುಕು ಪ್ರದರ್ಶನವನ್ನು ಅನುಮತಿ ಪಡದೇ ಅಣಕು ಪ್ರದರ್ಶನ ನಡೆಸಲಾಗಿದೆ. ಹೆಚ್ಪಿ ಹೈಡ್ರೋ ಪರೀಕ್ಷೆ ವೇಳೆ ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ.