Loading video

ಶಿರೂರು ಗುಡ್ಡ ಕುಸಿತ ಪ್ರಕರಣ: ನದಿಗೆ ಬಿದ್ದಿದ್ದ ಟ್ಯಾಂಕರ್ ನಾಲ್ಕು ದಿನಗಳ ನಂತರ ದಡಕ್ಕೆ!

Updated on: Jul 20, 2024 | 11:40 AM

ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ಭಾರೀ ಪ್ರಮಾಣದ ಮಣ್ಣ ಗುಡ್ಡೆಯಾಗಿದ್ದ ಕಾರಣ ವಾಹನ ಸಂಚಾರ ನಿಂತು ಹೋಗಿತ್ತು. ಒಂದು ಬದಿಯ ರಸ್ತೆ ಮೇಲಿನ ಮಣ್ಣನ್ನು ತೆರವು ಮಾಡಲಾಗಿದೆ. ಮತ್ತೊಂದು ಮಣ್ಣು ತೆರವುಗೊಳ್ಳಲು ಸಮಯ ಹಿಡಿಯಲಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ತೆರವು ಕಾರ್ಯಾಚರಣೆ ವಿಳಂಬಗೊಳ್ಳುತ್ತಿದೆ.

ಕಾರವಾರ: ಶಿರೂರು ಬಳಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಜಾರಿದ್ದ ಗ್ಯಾಸ್ ಟ್ಯಾಂಕರ್ ಅನ್ನು ಕಡೆಗೂ ಯಾವುದೇ ಅನಾಗಹುತ ಸಂಭವಿಸದ ಹಾಗೆ ಹೊರತೆಗೆಯಲಾಗಿದೆ. ಎಸ್ ಡಿ ಅರ್ ಎಫ್, ಎನ್ ಡಿ ಅರ್ ಎಫ್, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಸ್ಥಳೀಯರ ನೆರವಿನಿಂದ ಸುಮಾರು 24 ಗಂಟೆಗಳ ಸತತ ಪರಿಶ್ರಮದ ನಂತರ ಟ್ಯಾಂಕರನ್ನು ಕ್ರೇನ್ ಗಳ ಮೂಲಕ ಹೊರಗೆಳೆಯಲಾಗಿದೆ. ಟ್ಯಾಂಕರ್ ನಲ್ಲಿದ್ದ ಅನಿಲ ಸ್ವಲ್ಪ ಸ್ವಲ್ಪವಾಗಿ ಹೊರಹಾಕಿ ಅದು ಸಂಪೂರ್ಣವಾಗಿ ಬರಿದಾದ ಬಳಿಕ ಹೊರಗೆಳೆಲಾಗಿದೆ ಎಂದು ನಮ್ಮ ಕಾರವಾರ ವರದಿಗಾರ ಹೇಳುತ್ತಾರೆ. ಶಿರೂರು ಸುತ್ತಲಿನ ಸುಮಾರು ಹತ್ತು ಗ್ರಾಮಗಳ ನಿವಾಸಿಗಳಿಗೆ ಅನಿಲದಿಂದ ಅಪಾಯ ಸಂಭಿಸುವ ಸಾಧ್ಯತೆ ಇದ್ದ ಕಾರಣ ಜಿಲ್ಲಾಡಳಿತವು ಅವರನ್ನೆಲ್ಲ ಬೇರೆ ಸ್ಥಳಗಳಿಗೆ ಶಿಫ್ಟ್ ಮಾಡಿತ್ತು. ಸ್ಥಳೀಯರು ಹೇಳುವ ಪ್ರಕಾರ ಕಳೆದ 4 ದಿನಗಳಿಂದ ಯಾರ ಮನೆಯಲ್ಲೂ ಒಲ್ಲೆ ಹೊತ್ತಿಲ್ಲ, ಪೂಜೆಗಳನ್ನೂ ಮಾಡಿಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಈ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇವತ್ತು ಸಾಯಂಕಾಲದ ಹೊತ್ತಿಗೆ ಗ್ರಾಮಸ್ಥರೆಲ್ಲ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಶಿರೂರ ಗುಡ್ಡ ಕುಸಿತ: ನದಿಗೆ ಕೊಚ್ಚಿ ಹೋದ ಗ್ಯಾಸ್ ಟ್ಯಾಂಕರ್​ ಬಗ್ಗೆ ಹೆಚ್ಚಿದ ಆತಂಕ

Published on: Jul 20, 2024 10:45 AM