ತಾಂಡಾಗಳಿಗೆ ಮತಬೇಟೆಗೆ ತೆರಳಿದ ಗೀತಾ ಶಿವರಾಜಕುಮಾರ್ ಬಂಜಾರಾ ಸಮುದಾಯದ ಉಡುಗೆ ತೊಟ್ಟು ಖುಷಿಪಟ್ಟರು!
ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ತಾಂಡಾವೊಂದರ ಜನ ಗೀತಾ ಅವರಿಗೆ ತಮ್ಮ ಸಾಂಪ್ರದಾಯಿಕ ಉಡುಗೆ ತೊಡಿಸಿ ಅವರನ್ನು ತಮ್ಮವರಲ್ಲಿ ಒಬ್ಬರಾಗಿಸಿಕೊಂಡು ಖುಷಿಪಟ್ಟರು. ಆದರೆ ಜನ ಶಿವಣ್ಣರನ್ನು ನೋಡಲು ಜಮಾಯಿಸುತ್ತಿದ್ದಾರೆ ಅನಿಸುತ್ತದೆ, ಅದು ವೋಟುಗಳಲ್ಲಿ ಪರಿವರ್ತನೆಯಾದೀತೆ?
ಶಿವಮೊಗ್ಗ: ಈ ಚುನಾವಣೆಯೇ ಹಾಗೆ, ರಾಜಕಾರಣಿಗಳನ್ನು ವೇಷಭೂಷಣ ಬದಲಿಸುವಂತೆ ಮಾಡುತ್ತದೆ, ವೋಟು ಗಿಟ್ಟಿಸಲು ಅದನ್ನೆಲ್ಲ ಮಾಡಬೇಕು ಸ್ವಾಮಿ, ಬೇರೆ ದಾರಿಯಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೀತಾ ಶಿವರಾಜಕುಮಾರ್ (Geetha Shiva Rajkumar) ತಮ್ಮ ಪತಿ ಶಿವ ರಾಜಕುಮಾರ್ ಅವರೊಣದಿಗೆ (Shiva Rajkumar) ಕ್ಷೇತ್ರದ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ಲಗ್ಗೆಯಿಟ್ಟು ಮತಯಾಚಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಂಜಾರಾ ಸಮುದಾಯದ (Banjara community) ಜನ ಸಾಕಷ್ಟಿದ್ದಾರೆ. ಸಾಮಾನ್ಯವಾಗಿ ತಾಂಡಾಗಳಲ್ಲಿ ವಾಸಿಸುವ ಸಮುದಾಯದ ಮಹಿಳೆಯರು ಈಗಲೂ ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ. ನಗರಪ್ರದೇಶಗಳಲ್ಲಿ ವಾಸಿಸುವ ಬಂಜಾರಾ ಸಮುದಾಯ ಜನ ಆಧುನಿಕತೆಗೆ ಮಾರುಹೋಗಿ ತಮ್ಮ ವಸ್ತ್ರವಿನ್ಯಾಸಗಳಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ತಾಂಡಾವೊಂದರ ಜನ ಗೀತಾ ಅವರಿಗೆ ತಮ್ಮ ಸಾಂಪ್ರದಾಯಿಕ ಉಡುಗೆ ತೊಡಿಸಿ ಅವರನ್ನು ತಮ್ಮವರಲ್ಲಿ ಒಬ್ಬರಾಗಿಸಿಕೊಂಡು ಖುಷಿಪಟ್ಟರು. ಆದರೆ ಜನ ಶಿವಣ್ಣರನ್ನು ನೋಡಲು ಜಮಾಯಿಸುತ್ತಿದ್ದಾರೆ ಅನಿಸುತ್ತದೆ, ಅದು ವೋಟುಗಳಲ್ಲಿ ಪರಿವರ್ತನೆಯಾದೀತೆ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೈಂದೂರು: ಕಾಣೆ, ಅಂಜಲ್, ಭೂತಾಯಿ ಇಷ್ಟ – ಚುನಾವಣೆ ಪ್ರಚಾರದ ವೇಳೆ ಶಿವಣ್ಣ ಮೀನೂಟದ ಮಾತು!