ಇಂದು ಯುಗಾದಿ ಹೊಸತಡುಕು, ಬೆಂಗಳೂರು ಮಟನ್ ಸ್ಟಾಲ್ ಗಳ ಮುಂದೆ ಸಾಲುಸಾಲು ಜನ!
ಇವರು ಉತ್ತಮ ಗುಣಮಟ್ಟದ ಕುರಿಮಾಂಸ ಮಾರಾಟ ಮಾಡುತ್ತಾರೆ ಎಂದು ಬೆಳಗಿನ ಜಾವದಿಂದ ಮಟನ್ ಖರೀದಿಸಲು ಅಂಗಡಿ ಮುಂದೆ ಸರತಿ ಸಾಲಲ್ಲಿ ನಿಂತಿರುವ ಜನ ಹೇಳುತ್ತಾರೆ. ಕ್ಯೂ ಎಷ್ಟು ಉದ್ದ ಇದೆ ಅನ್ನೋದನ್ನು ನೀವು ಗಮನಿಸಬಹುದು. ಕೆಲವರು ಬೆಳಗಿನ ಜಾವ 3 ಗಂಟೆಯಿಂದ ಸಾಲಲ್ಲಿ ನಿಂತಿದ್ದಾರಂತೆ.
ಬೆಂಗಳೂರು: ನಿನ್ನೆ ಯುಗಾದಿ ಹಬ್ಬದ (Ugadi festival) ಪ್ರಯುಕ್ತ ಒಬ್ಬಟ್ಟು, ಕಡುಬು ಮತ್ತು ಬೇರೆ ಸಿಹಿತಿಂಡಿಗಳನ್ನು ನಾಡಿನ ಜನತೆಗೆ ಇಂದು ಹಬ್ಬದ ಹೊಸತಡುಕು ಸಂಭ್ರಮ. ಮಾಂಸಾಹಾರಿಗಳು (non vegetarians) ಚಿಕನ್ ಮತ್ತು ಮಟನ್ ಸ್ಟಾಲ್ ಗಳಿಗೆ ತೆರಳಿ ಮಾಂಸ ಮನೆಗೆ ಕೊಂಡೊಯ್ದು ಬೇಯಿಸಿಕೊಂಡು ತಿನ್ನುತ್ತಾ ಹೊಸತಡಕನ್ನು ಎಂಜಾಯ್ ಮಾಡುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ (south Karnataka) ಇದನ್ನು ಹೊಸತಡುಕು ಅಂತ ಹೇಳಿದರೆ ಉತ್ತರ ಕರ್ನಾಟಕದಲ್ಲಿ ಕರಿ ಅನ್ನುತ್ತಾರೆ. ಓಕೆ, ನಗರದ ಬಾಪೂಜಿನಗರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್ ಈ ಭಾಗದಲ್ಲಿ ಭಾರೀ ಫೇಮಸ್. ಇವರು ಉತ್ತಮ ಗುಣಮಟ್ಟದ ಕುರಿಮಾಂಸ ಮಾರಾಟ ಮಾಡುತ್ತಾರೆ ಎಂದು ಬೆಳಗಿನ ಜಾವದಿಂದ ಮಟನ್ ಖರೀದಿಸಲು ಅಂಗಡಿ ಮುಂದೆ ಸರತಿ ಸಾಲಲ್ಲಿ ನಿಂತಿರುವ ಜನ ಹೇಳುತ್ತಾರೆ. ಕ್ಯೂ ಎಷ್ಟು ಉದ್ದ ಇದೆ ಅನ್ನೋದನ್ನು ನೀವು ಗಮನಿಸಬಹುದು. ಕೆಲವರು ಬೆಳಗಿನ ಜಾವ 3 ಗಂಟೆಯಿಂದ ಸಾಲಲ್ಲಿ ನಿಂತಿದ್ದಾರಂತೆ. ಹಬ್ಬದ ಪ್ರಯುಕ್ತ ಮಟನ್ ಬೆಲೆ ಕೂಡ ಜಾಸ್ತಿಯಾಗಿದ್ದು ಸಾಮಾನ್ಯ ದಿನಗಳಲ್ಲಿ ₹ 750 ಗಳಿಗೆ ಕೇಜಿ ಇರೋದು ಇವತ್ತು ₹ 850 ಅಂತೆ. ಮಟನ್ ಪ್ರಿಯರಿಗೆ ಬೆಲೆ ನಗಣ್ಯ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯುಗಾದಿ ಹಬ್ಬದ ದಿನದಂದು ಷೇರುಪೇಟೆ ಧಮಾಕ; ದಾಖಲೆ ಮಟ್ಟ ಮುಟ್ಟಿದ ಸೆನ್ಸೆಕ್ಸ್, ನಿಫ್ಟಿ