ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಸುದೀಪ್ ಎದುರು ಗಿಲ್ಲಿ ಓಪನ್ ಚಾಲೆಂಜ್

Updated on: Dec 14, 2025 | 9:03 AM

ರಜತ್ ಕಿಶನ್ ಅವರು ಬಿಗ್​ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮಕ್ಕೆ ಬಂದಾಗಿನಿಂದ ಗಿಲ್ಲಿ ನಟ ಜತೆ ಆಪ್ತವಾಗಿದ್ದರು. ಆದರೆ ಈಗ ಅವರ ಹಾವಭಾವ ಬದಲಾಗಿದೆ. ಗಿಲ್ಲಿ ಅವರು ಕಿಚ್ಚ ಸುದೀಪ್ ಎದುರಲ್ಲೇ ಬಹಿರಂಗ ಸವಾಲು ಹಾಕಿದ್ದಾರೆ.

ಬಿಗ್​ ಬಾಸ್ ಮನೆಗೆ ರಜತ್ ಕಿಶನ್ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಶೋಗೆ ಕಾಲಿಟ್ಟಾಗಿನಿಂದ ಗಿಲ್ಲಿ ಜೊತೆ ಆಪ್ತವಾಗಿದ್ದರು. ಆದರೆ ಈಗ ಅವರ ಹಾವಭಾವ ಬದಲಾಗಿದೆ. ಯಾಕೆಂದರೆ, ಗಿಲ್ಲಿ ನಟ (Gilli Nata) ಅವರು ಕಿಚ್ಚ ಸುದೀಪ್ ಎದುರಲ್ಲೇ ಒಂದು ಬಹಿರಂಗ ಸವಾಲು ಹಾಕಿದ್ದಾರೆ. ‘ರಜತ್ ಅವರ ಪಾಪದ ಕೊಡ ತುಂಬಿದೆ. ಇವರನ್ನು ಹೊರಗೆ ಕಳಿಸಿಯೇ ನಾನು ಆಚೆ ಕಾಲಿಡೋದು’ ಎಂದು ಗಿಲ್ಲಿ ಹೇಳಿದ್ದಾರೆ. ಅವರು ಹೀಗೆ ಓಪನ್ ಚಾಲೆಂಜ್ ಮಾಡಿದ್ದು ನೋಡಿ ಅಶ್ವಿನಿ ಗೌಡ ಅವರು ಖುಷಿಪಟ್ಟಿದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನ ಡಿಸೆಂಬರ್ 14ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಪೋಸ್ಟ್ ಮಾಡಿದೆ. ಇಷ್ಟು ದಿನಗಳ ತನಕ ಗಿಲ್ಲಿ ನಟ ಮತ್ತು ರಜತ್ (Rajath Kishan) ಅವರು ನಗುನಗುತ್ತಾ ಕಾಮಿಡಿ ಮಾಡಿಕೊಂಡು ಕಾಲ ಕಳೆಯುತ್ತಿದ್ದರು. ಇನ್ಮೇಲೆ ಅವರ ಆಟ ಹೇಗಿರಲಿದೆ ಎಂಬುದನ್ನು ತಿಳಿಯುವ ಕುತೂಹಲ ವೀಕ್ಷಕರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.