ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ತಬ್ಬಿಕೊಂಡ ಕ್ಷಣ ವಿವರಿಸಿದ ಗಿಲ್ಲಿ

Edited By:

Updated on: Jan 23, 2026 | 6:00 PM

‘ಬಿಗ್ ಬಾಸ್ ಕನ್ನಡ 12’ ಶೋನಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಫಿನಾಲೆ ಅಂತಿಮ ಹಂತಕ್ಕೆ ಬಂದಿದ್ದರು. ಸುದೀಪ್ ಅಕ್ಕಪಕ್ಕದಲ್ಲಿ ಅವರಿಬ್ಬರು ನಿಂತಿದ್ದರು. ಕೊನೆಗೂ ಗೆದ್ದಿದ್ದು ಗಿಲ್ಲಿ ನಟ. ಆ ಕ್ಷಣದಲ್ಲಿ ರಕ್ಷಿತಾ ಶೆಟ್ಟಿ ಅವರು ಓಡಿ ಬಂದು ಗಿಲ್ಲಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಅವರು ಫಿನಾಲೆ ಅಂತಿಮ ಹಂತಕ್ಕೆ ಬಂದಿದ್ದರು. ಸುದೀಪ್ ಅವರ ಅಕ್ಕಪಕ್ಕದಲ್ಲಿ ಅವರಿಬ್ಬರು ನಿಂತಿದ್ದರು. ಕೊನೆಗೂ ಗೆದ್ದಿದ್ದು ಗಿಲ್ಲಿ ನಟ. ಆ ಕ್ಷಣದಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರು ಓಡಿ ಬಂದು ಗಿಲ್ಲಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದರು. ಅದರ ಬಗ್ಗೆ ಗಿಲ್ಲಿ ನಟ ಅವರು ಈಗ ಮಾತನಾಡಿದ್ದಾರೆ. ‘ಒಂದು ವೇಳೆ ರಕ್ಷಿತಾ ಶೆಟ್ಟಿ ಗೆದ್ದಿದ್ದರೆ ನನಗೆ ಬೇಜಾರು ಆಗುತ್ತಿತ್ತು. ಅದು ಸಹಜ. ಆದರೆ ನಾನು ಗೆದ್ದಾಗ ರಕ್ಷಿತಾ ಬಂದು ಹಗ್ ಮಾಡಿ, ಅಭಿನಂದನೆ ತಿಳಿಸಿದಳು. ಅವಳು ಖುಷಿಪಟ್ಟಳು. ಆ ಖುಷಿ ನಿಜವಾಗಿ ಕಾಣಿಸುತ್ತಿತ್ತು. ನನ್ನ ಗೆಲುವಿನ ಖುಷಿ ಅವಳ ಕಣ್ಣಿನಲ್ಲಿ ಕಾಣಿಸಿತು. ಆ ಕಾರಣಕ್ಕಾಗಿಯೇ ಅವಳು ಎಲ್ಲರಿಗೂ ಇಷ್ಟ ಆಗುವುದು’ ಎಂದು ಗಿಲ್ಲಿ ನಟ (Gilli Nata) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.