ಗೃಹಲಕ್ಷ್ಮಿ ಯೋಜನೆ ಕೂಡಿಟ್ಟ ಹಣದಿಂದ ಮಗನಿಗೆ ಬೈಕ್ ಕೊಡಿಸಿದ ಗೋಕಾಕ್ ಗೃಹಿಣಿ ಬಾಗವ್ವಾ ಸಣ್ಣಕ್ಕಿ
ಶೋರೂಮ್ ನಿಂದ ಬೈಕ್ ಡೆಲಿವರಿ ಪಡೆದ ನಂತರ ಬಾಗವ್ವಾ ಮತ್ತು ಅವರ ಮಗ ರಮೇಶ್ ಅದಕ್ಕೆ ಪೂಜೆ ಸಲ್ಲಿಸಿದರು ಮತ್ರು ಪರಸ್ಪರ ಸಿಹಿ ತಿನ್ನಿಸಿದರು. ಅದಾದ ಮೇಲೆ ಎಲ್ಲರೂ ಮಾಡುವಂತೆ ರಮೇಶ್ ಅಮ್ಮನನ್ನು ಪಿಲಿಯನ್ ರೈಡರ್ ಮಾಡಿಕೊಂಡು ಒಂದು ರೌಂಡ್ ಸಹ ಹೋಗಿ ಬಂದರು.
ಬೆಳಗಾವಿ: ಯಾರೇನೇ ಹೇಳಲಿ, ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣವನ್ನು ಕೆಲ ಗೃಹಿಣಿಯರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಗೋಕಾಕ ತಾಲೂಕು ಕೌಜಲಗಿ ಗ್ರಾಮದ ಬಾಗವ್ವಾ ಸಣ್ಣಕ್ಕಿ ಹೆಸರಿನ ಗೃಹಿಣಿಯು ಗೃಹಲಕ್ಷ್ಮಿ ಯೋಜನೆಯ ರೂ. 20,000 ಹಣ ಕೂಡಿಟ್ಟು ಸೊಸೆಯ ಬಳಿಯಿದ್ದ ರೂ. 20,000 ಹಣ ಅದಕ್ಕೆ ಸೇರಿಸಿ ಮಗನಿಗೆ ಒಂದು ಬೈಕ್ ಕೊಡಿಸಿದ್ದು ಇವತ್ತು ಅದರ ಡೆಲಿವರಿ ಪಡೆದರು. ಹಬ್ಬದ ಸಂಭ್ರಮಕ್ಕೆ ಬೈಕ್ನ ಮೆರಗು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ಕೊಂಚ ತಡವಾದರೂ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ