ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ನಿಮ್ಮ ಚಿನ್ನದ ಸಾಲದ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು, ನಿಮ್ಮ ಬ್ಯಾಂಕ್ ಅಥವಾ ಸಾಲ ನೀಡಿದ ಸಂಸ್ಥೆಗೆ ಭೇಟಿ ನೀಡಿ. ನಿಮ್ಮ ಎಲ್‌ಟಿವಿ ರೇಷಿಯೋ, ಹೆಚ್ಚುವರಿ ಭದ್ರತೆಯ ಅಗತ್ಯತೆ ಅಥವಾ ಮರುಪಾವತಿ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಎಂಬುದು ಆರ್ಥಿಕ ತಜ್ಞರ ಸಲಹೆ. ನೀವು ಇತ್ತೀಚಿನ ತಿಂಗಳುಗಳಲ್ಲಿ, ಅಂದರೆ ಚಿನ್ನದ ಬೆಲೆ ಹೆಚ್ಚಿದ್ದಾಗ ಸಾಲ ಪಡೆದಿದ್ದರೆ, ನಿಮ್ಮ ಲೋನ್ ಟು ವ್ಯಾಲ್ಯೂ ರೇಷಿಯೋ ಹೆಚ್ಚಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಬ್ಯಾಂಕ್‌ಗಳು ನಿಮಗೆ ನೋಟಿಸ್ ಕಳುಹಿಸುವ ಸಾಧ್ಯತೆ ಹೆಚ್ಚು. ನೋಟಿಸ್ ಸಿಗದೇ ಇದ್ದರೂ, ನಿಮ್ಮ ಲೋನ್ ಸ್ಥಿತಿಯನ್ನು ಪರಿಶೀಲಿಸುವುದು ಉತ್ತಮ ಎಂದು ರುದ್ರಮೂರ್ತಿ ಸಲಹೆ ನೀಡಿದ್ದಾರೆ.
ಬೆಂಗಳೂರು, ನವೆಂಬರ್ 23: ಈಗಾಗಲೇ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಭಾರೀ ಇಳಿಕೆಯಾಗುತ್ತಿದೆ. ಇದು ಗೋಲ್ಡ್ ಲೋನ್ ಪಡೆದವರಲ್ಲಿ ಆತಂಕ ಸೃಷ್ಟಿಸಿವೆ. ಸಿ.ಎ. ರುದ್ರಮೂರ್ತಿ ಬಿ.ವಿ ಈ ಕುರಿತು ಟಿವಿ9 ಪಾಡ್ಕಾಸ್ಟ್ನಲ್ಲಿ ಪ್ರಮುಖ ಮಾಹಿತಿಗಳನ್ನು ನೀಡಿದ್ದಾರೆ. ಚಿನ್ನದ ಸಾಲದ (ಗೋಲ್ಡ್ ಲೋನ್) ಖಾತೆಗಳನ್ನು ಸೂಕ್ತ ಸಮಯದಲ್ಲಿ ನಿರ್ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಅವರು ವಿವರಿಸಿದ್ದಾರೆ. ನೀವೇನಾದರೂ ಚಿನ್ನದ ಬೆಲೆ ಅತಿ ಹೆಚ್ಚಾಗಿರುವ ಸಮಯದಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡಿದ್ದರೆ ಈಗ ಆದಷ್ಟು ಬೇಗ ಅದನ್ನು ಕ್ಲೋಸ್ ಮಾಡುವುದು ಬಹಳ ಮುಖ್ಯ.
ಚಿನ್ನದ ಬೆಲೆ ಹೆಚ್ಚಿದ್ದಾಗ ನೀವು ಸಾಲ ಪಡೆದಿದ್ದರೆ, ಈಗ ಬೆಲೆ ಕುಸಿದಾಗ ನಿಮ್ಮ ಎಲ್‌ಟಿವಿ ರೇಷಿಯೋ 85%ನಿಂದ 90%, 95% ಅಥವಾ 100%ಕ್ಕೆ ಏರಬಹುದು. ಇದು ಸಾಲ ನೀಡಿದವರಿಗೆ ಅಪಾಯಕಾರಿ. ಆದ್ದರಿಂದ, ಸಾಲಗಾರರು ನಿಮ್ಮ ಚಿನ್ನವನ್ನು ಹರಾಜು ಹಾಕುವ ಅಥವಾ ಮಾರಾಟ ಮಾಡುವ ನೋಟಿಸ್ ಕಳುಹಿಸಬಹುದು. ನೀವು ಇತ್ತೀಚಿನ ತಿಂಗಳುಗಳಲ್ಲಿ, ಅಂದರೆ ಚಿನ್ನದ ಬೆಲೆ ಹೆಚ್ಚಿದ್ದಾಗ ಸಾಲ ಪಡೆದಿದ್ದರೆ, ನಿಮ್ಮ ಲೋನ್ ಟು ವ್ಯಾಲ್ಯೂ ರೇಷಿಯೋ ಹೆಚ್ಚಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಬ್ಯಾಂಕ್‌ಗಳು ನಿಮಗೆ ನೋಟಿಸ್ ಕಳುಹಿಸುವ ಸಾಧ್ಯತೆ ಹೆಚ್ಚು. ನೋಟಿಸ್ ಸಿಗದೇ ಇದ್ದರೂ, ನಿಮ್ಮ ಲೋನ್ ಸ್ಥಿತಿಯನ್ನು ಪರಿಶೀಲಿಸುವುದು ಉತ್ತಮ ಎಂದು ರುದ್ರಮೂರ್ತಿ ಸಲಹೆ ನೀಡಿದ್ದಾರೆ.
ಆದ್ದರಿಂದ, ನಿಮ್ಮ ಚಿನ್ನದ ಸಾಲದ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು, ನಿಮ್ಮ ಬ್ಯಾಂಕ್ ಅಥವಾ ಸಾಲ ನೀಡಿದ ಸಂಸ್ಥೆಗೆ ಭೇಟಿ ನೀಡಿ. ನಿಮ್ಮ ಎಲ್‌ಟಿವಿ ರೇಷಿಯೋ, ಹೆಚ್ಚುವರಿ ಭದ್ರತೆಯ ಅಗತ್ಯತೆ ಅಥವಾ ಮರುಪಾವತಿ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಎಂಬುದು ಆರ್ಥಿಕ ತಜ್ಞರ ಸಲಹೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
