ನಮ್ಮ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದವರನ್ನು ಕೂಡಲೇ ಬಂಧಿಸಬೇಕು; ಗಣೇಶ್
ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ ಸುಟ್ಟು ಹಾಕಿದ ಘಟನೆ ನಡೆದಿದೆ. ಅದನ್ನು ಗಣೇಶ್ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಎರಡನೇ ಬಾರಿಗೆ ಒಂದಾಗಿದ್ದಾರೆ. ‘ಚಮಕ್’ ಮೂಲಕ ಹಿಟ್ ಎನಿಸಿಕೊಂಡಿದ್ದ ಈ ಜೋಡಿ ಈಗ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂತೆಯೇ ಸಿನಿಮಾವನ್ನು ಎಂಟರ್ಟೇನಿಂಗ್ ಆಗಿ ಕಟ್ಟಿಕೊಟ್ಟಿದ್ದರು ಸುನಿ. ಇಂದು ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ ಸುಟ್ಟು ಹಾಕಿದ ಘಟನೆ ನಡೆದಿದೆ. ಅದನ್ನು ಗಣೇಶ್ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ಸಖತ್ ಸಿನಿಮಾದಲ್ಲಿ ಗಣೇಶ್ ಇದೇ ಮೊದಲ ಬಾರಿಗೆ ಅಂಧನ ರೀತಿಯಲ್ಲಿ ನಟಿಸಿದ್ದಾರೆ. ಕೊಟ್ಟ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಬಾಲು ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಶ್ವಿಕಾ ಕೂಡ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆಯುತ್ತಾರೆ. ನಟಿ ಸುರಭಿ ಉತ್ತಮವಾಗಿ ನಟಿಸಿದ್ದಾರೆ. ಗಣೇಶ್ ಮಗ ವಿಹಾನ್ ಕೂಡ ಸಿನಿಮಾದಲ್ಲಿ ನಟಿಸಿದ್ದಾನೆ. ಮೊದಲ ಚಿತ್ರದಲ್ಲೇ ಅವನು ಎಲ್ಲರ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ: ‘ಸಖತ್’ ಸಿನಿಮಾದಿಂದ ಅಚಾತುರ್ಯ; ಅಂಧ ಸಮುದಾಯಕ್ಕೆ ಕ್ಷಮೆ ಕೋರಿದ ನಿರ್ದೇಶಕ ಸಿಂಪಲ್ ಸುನಿ