ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಪ್ರಧಾನಿಯವರೊಂದಿಗೆ ಮಾತಾಡಿ ಊರಿಗೆ ವಾಪಸ್ಸಾದ ಗೊಂದಳಿ ಭೀಷ್ಮ ವೆಂಕಪ್ಪ ಸುಗತೇಕರ್
ಎಲ್ಲ ಕಲೆಗಳಿಗೆ ಜಾನಪದವೇ ಮೂಲ, ತಾಯಿ ಸರಸ್ವತಿಯ ಕೃಪೆಯಿಂದ ಇಂಥ ಸ್ಥಾನಮಾನ ಸಿಕ್ಕಿದೆ, ಗೊಂದಳಿಯನ್ನು ಬಹಳ ಕಡೆ ಆಡಿದ್ದೇನೆ, ಆದರೆ ದೆಹಲಿಯಲ್ಲಿ ಗಣ್ಯರ ಮುಂದೆ ಹೋಗಿ ನಿಂತಾಗ ಬದುಕು ಸಾರ್ಥಕವಾದಂಥ ಭಾವ ಮನಸ್ಸಲ್ಲಿ ಮೂಡಿತು, ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರಿಗಾಲಲ್ಲಿ ಹೋಗಿದ್ದೆ, ಮಠಮಾನ್ಯ, ದೇವಸ್ಥಾನಗಳಿಗೆ ಹೋಗಬೇಕಾದರೆ ಬರಿಗಾಲಲ್ಲಿ ಹೊಗುತ್ತೇನೆ, ಪದ್ಮಶ್ರೀ ಪ್ರಶಸ್ತಿ ಪಡೆದ ಸ್ಥಳವೂ ಪವಿತ್ರವಾಗಿತ್ತು ಎಂದು ಅವರು ಹೇಳಿದರು.
ಬಾಗಲಕೋಟೆ, ಮೇ 30: ಗೊಂದಳಿ ಭೀಷ್ಮ ಎಂದೇ ಖ್ಯಾತರಾಗಿರುವ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತಾಡಿ ಊರಿಗೆ ವಾಪಸ್ಸಾಗಿದ್ದಾರೆ. 82-ವರ್ಷ ವಯಸ್ಸಿನ ವೆಂಕಪ್ಪ ಸುಗತೇಕರ್ ದೆಹಲಿಯಲ್ಲಿ ಕಳೆದ ದಿನಗಳನ್ನು ಮತ್ತು ತಮಗೆ ಸಿಕ್ಕ ಉಪಚಾರವನ್ನು ಅಭಿಮಾನದಿಂದ, ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪ್ರಧಾನಿ ಮೋದಿಯವರು ಅತ್ಮೀಯತೆಯಿಂದ ತಮ್ಮೊಂದಿಗೆ ಮಾತಾಡಿದ್ದನ್ನು ಕೃತಜ್ಞತೆಯಿಂದ ನೆನಸುತ್ತಾರೆ. ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು, ಅವರು ರಾಜಕೀಯದಲ್ಲಿ ಸಾಕಷ್ಟು ಅನುಭವಸ್ಥರಾಗಿರುವುದರಿಂದ ಕಲಾವಿದರನ್ನು ಗುರುತಿಸುತ್ತಾರೆ ಎಂದು ಹೇಳಿದ ವೆಂಕಪ್ಪ, ಜಾನಪದವೇ ಜ್ಞಾನಪದ ಎಂದು ಜಾನಪದ ಕಲೆಗಳನ್ನು ಕೊಂಡಾಡುತ್ತಾರೆ.
ಇದನ್ನೂ ಓದಿ: ಮೋದಿ ಮೆಚ್ಚುಗೆಗೆ ಬಾಗಲಕೋಟೆಯ ಪದಗಾರ ವೆಂಕಪ್ಪ ಸುಗತೇಕರ್ ಫುಲ್ ಖುಷ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

