ಗೂಗಲ್ ಪಿಕ್ಸೆಲ್ ಸ್ಮಾರ್ಟ್ವಾಚ್ ಕಾಯುತ್ತಿರುವರಿಗೆ ಸಿಹಿಸುದ್ದಿ, ವಾಚ್ ಮುಂದಿನ ವರ್ಷ ಲಾಂಚ್ ಆಗುತ್ತದಂತೆ!!
ಗೂಗಲ್ ಪಿಕ್ಸೆಲ್ ತಯಾರಿಸುತ್ತಿರುವ ಸ್ಮಾರ್ಟ್ ವಾಚ್ನ ಇಮೇಜ್ಗಳು ಮತ್ತು ಒಂದಷ್ಟು ಮಾಹಿತಿ ಲೀಕ್ ಆಗಿದ್ದು ವಾಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಟೆಕ್ ದೈತ್ಯ ಗೂಗಲ್ ಪಿಕ್ಸೆಲ್ 2019 ರಿಂದಲೇ ಸ್ಮಾರ್ಟ್ ವಾಚ್ ತಯಾರಿಯಲ್ಲಿ ತೊಡಗಿರುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಗೂಗಲ್ ಬಹಳಷ್ಟು ಮುಂದಿದ್ದರೂ ಸ್ಮಾರ್ಟ್ ವಾಚ್ ತಯಾರಿಕೆಗೆ ಅದ್ಯಾಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆಯೋ ಅನ್ನೋದು ಅರ್ಥವಾಗದ ಸಂಗತಿಯಾಗಿದೆ. ನಮಗೆ ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಗೂಗಲ್ ಪಿಕ್ಸೆಲ್ ಸ್ಮಾರ್ಟ್ ವಾಚ್ ಮುಂದಿನ ವರ್ಷ ಮಾರ್ಕೆಟ್ ಗೆ ಬರಲಿದೆ. ಗೂಗಲ್ ಪಿಕ್ಸೆಲ್ ಸಂಸ್ಥೆಯ ಹಾರ್ಡ್ ವೇರ್ ಟೀಮು ವಾಚ್ ತಯಾರಿಸುವುದರಲ್ಲಿ ಸಂಪೂರ್ಣವಾಗಿ ಮಗ್ನವಾಗಿದೆಯಂತೆ. ತಯಾರಿಕೆ ಹಂತದಲ್ಲಿರುವ ವಾಚ್ಗೆ ಕಂಪನಿಯು ರೋಹನ್ ಎಂಬ ಕೋಡ್ ಹೆಸರು ನೀಡಿದೆ. ಆದರೆ, ಲೀಕ್ ಆಗಿರುವ ಮಾಹಿತಿಯ ಪ್ರಕಾರ ವಾಚ್ಗೆ ಬ್ಲ್ಯಾಕ್ ಗೋಸ್ಟ್ ಎಂಬ ಹೆಸರಿಡುವ ಸಾಧ್ಯತೆ ಇದೆ.
ಗೂಗಲ್ ಪಿಕ್ಸೆಲ್ ತಯಾರಿಸುತ್ತಿರುವ ಸ್ಮಾರ್ಟ್ ವಾಚ್ನ ಇಮೇಜ್ಗಳು ಮತ್ತು ಒಂದಷ್ಟು ಮಾಹಿತಿ ಲೀಕ್ ಆಗಿದ್ದು ವಾಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಮ್ಮೆ ಮಾರ್ಕೆಟ್ ಗೆ ಬಂತು ಅಂತಾದರೆ, ಗೂಗಲ್ ಪಿಕ್ಸೆಲ್ ಸ್ಮಾರ್ಟ್ ವಾಚ್, ಌಪಲ್ ಸಂಸ್ಥೆಯ ಸ್ಮಾರ್ಟ್ ವಾಚ್ನೊಂದಿಗೆ ನೇರ ಸ್ಪರ್ಧೆ ಒಡ್ಡಲಿದೆ.
ಲೀಕ್ ಆಗಿರುವ ಮಾಹಿತಿ ಪ್ರಕಾರ ನೀವು ನಡೆದಾಡು ಹೆಜ್ಜೆಗಳ ಸಂಖ್ಯೆ, ಹೃದಯ ಬಡಿತ, ನಾಡಿ ಬಡಿತ ಡಿಸ್ಪ್ಲೇ ಮಾಡುವ ಸ್ಪೆಸಿಫಿಕೇಶನ್ಗಳ ಜೊತೆಗೆ ಇನ್ನೂ ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ ಎಂದು ಗೊತ್ತಾಗಿದೆ. ಗೂಗಲ್ ಪಿಕ್ಸೆಲ್ ಅಭಿಮಾನಿಗಳಿಗೆ ಅದರ ಸ್ಮಾರ್ಟ್ ವಾಚ್ ಮಾರ್ಕೆಟ್ಗೆ ಬರುವ ವಿಷಯ ಸಂತಸ ನೀಡಿದೆಯಾದರೂ ಇನ್ನೂ ಕಾಯಬೇಕಾ ಅಂತ ಗೊಣಗುವವರ ಸಂಖ್ಯೆ ಕಮ್ಮಿಯೇನೂ ಇಲ್ಲ.
ಇದನ್ನೂ ಓದಿ: ದೂರದೂರಿನಿಂದ ಮಗಳು ಆಗಮಿಸಿ ಸರ್ಪ್ರೈಸ್ ನೀಡಿದರೆ ತಂದೆಗೆ ಎಷ್ಟು ಖುಷಿಯಾಗುತ್ತದೆ?; ಭಾವುಕ ವಿಡಿಯೋ ನೋಡಿ