ಶಾಲೆಯಲ್ಲಿ ಓದುವಾಗ ಸಪೂರಳಾಗಿದ್ದ, ಸ್ನೇಹಿತೆಯರಿಂದ ಗೇಲಿಗೊಳಗಾಗುತ್ತಿದ್ದ ಹರ್ನಾಜ್ ಸಂಧು ಈಗ ಭುವನ ಸುಂದರಿ!

ಪಂಜಾಬಿನ ತರುಣಿ ಪೆರುಗ್ವೇಯ ನಾಡಿಯಾ ಫೆರೀರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲ ಎಮ್ಸ್ವಾನೆ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಬಾಚಿಕೊಂಡರು.

TV9kannada Web Team

| Edited By: Arun Belly

Dec 13, 2021 | 6:44 PM

ಇದೇನೇ ನೀನು ಇಷ್ಟು ಸಣ್ಣಕ್ಕಿದ್ದೀಯಾ, ಮನೇಲಿ ಅಪ್ಪ-ಅಮ್ಮ ನಿಂಗೆ ಊಟ ಹಾಕ್ತಾರೆ ತಾನೆ? ಅಂತ ಶಾಲಾದಿನಗಳಲ್ಲಿ ಸ್ನೇಹಿತೆಯರಿಂದ ಛೇಡಿಸಿಕೊಳ್ಳುತ್ತಿದ್ದ ಅವತ್ತಿನ ಸಪೂರ ದೇಹದ ಹುಡುಗಿ ಇವತ್ತು ಜಾಗತಿಕ ಸುಂದರಿ ಮಾರಾಯ್ರೇ! ಚಂಡೀಗಡ್​ನ 21-ವರ್ಷ ವಯಸ್ಸಿನ ತರುಣಿ ಹರ್ನಾಜ್ ಸಂಧು 21 ವರ್ಷಗಳ ಬಳಿಕ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಮೂರನೇ ಭಾರತೀಯರೆನಿಸಿಕೊಂಡಿದ್ದಾರೆ. ಇಸ್ರೇಲಿನ ಐಲತ್ ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ 2021 ಸ್ಪರ್ಧೆಯಲ್ಲಿ ಹರ್ನಾಜ್ ಭಾರತವನ್ನು ಪ್ರತಿನಿಧಿಸಿದ್ದರು. ನಿಮಗೆ ನೆನಪಿರಬಹುದು, 21 ವರ್ಷಗಳ ಹಿಂದೆ ಅಂದರೆ, 2000ರಲ್ಲಿ ಲಾರಾ ದತ್ತಾ ಅವರು ಭುವನ ಸುಂದರಿಯೆನಿಸಿಕೊಂಡ ನಂತರ ಭಾರತೀಯ ಯುವತಿಯರು ಈ ಗೌರವಕ್ಕೆ ಭಾಜನರಾಗಿರಲಿಲ್ಲ. ಎರಡು ದಶಕಗಳ ಪ್ರಶಸ್ತಿ ಬರವನ್ನು ಹರ್ನಾಜ್ ನೀಗಿಸಿದ್ದಾರೆ.

ಪಂಜಾಬಿನ ತರುಣಿ ಪೆರುಗ್ವೇಯ ನಾಡಿಯಾ ಫೆರೀರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲ ಎಮ್ಸ್ವಾನೆ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಬಾಚಿಕೊಂಡರು.

2020 ಭುವನ ಸುಂದರಿ ಮೆಕ್ಸಿಕೋದ ಆಂದ್ರೆಯ ಮೆಜಾ ಅವರ ಹರ್ನಾಜ್ ಸಂಧು ಅವರಿಗೆ ಕಿರೀಟ ತೊಡಿಸಿದರು. ಆಗಲೇ ಹೇಳಿದಂತೆ ಹರ್ನಾಜ್ ಮತ್ತು ಲಾರಾ ದತ್ತಾ ಅವರನ್ನು ಹೊರತುಪಡಿಸಿ ಸುಪ್ರಸಿದ್ಧ ಸಿನಿಮಾ ನಟಿ ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದರು.

ಹೊಸ ತಲೆಮಾರಿನ ಯುವತಿಯರಿಗೆ ಹರ್ನಾಜ್ ಯಾವ ಸಂದೇಶ ನೀಡಲು ಇಚ್ಛಿಸುತ್ತಾರೆ, ಇವತ್ತಿನ ಸ್ಪರ್ಧಾತ್ಮಕ ಸಮಯದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಅವರು ನೀಡುವ ಸಲಹೆ ಏನು ಎಂದು ಕೇಳಿದಾಗ, ‘ನಾನು ಹೇಳುವುದೇನೆಂದರೆ, ಈಗಿನ ಯುವತಿಯರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು, ನಾನು ಏನನ್ನಾದರೂ ಸಾಧಿಸಬಲ್ಲೆನೆಂಬ ಛಲವಿರಬೇಕು, ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಭಿನ್ನವಾಗಿದ್ದಾರೆ. ಆ ಭಾವನೆಯೇ ಅವರನ್ನು ಸುಂದರವಾಗಿಸುತ್ತದೆ. ನಮ್ಮನ್ನು ನಾವು ಬೇರೆಯವರ ಜೊತೆ ಹೋಲಿಸಿಕೊಳ್ಳುವ ಅವಶ್ಯಕತೆ ಇಲ್ಲ. ಪ್ರಪಂಚದಲ್ಲಿ ಹಲವಾರು ಸಂಗತಿಗಳು ಪ್ರತಿದಿನ ಸಂಭವಿಸುತ್ತಿರುತ್ತವೆ. ಅವುಗಳ ಕಡೆ ಗಮನಹರಿಸಿ,’ ಎಂದು ಹರ್ನಾಜ್ ಹೇಳಿದರು.

ಇದನ್ನೂ ಓದಿ:   Venkatesh Iyer: ಸ್ಫೊಟಕ ಶತಕ ಸಿಡಿಸಿದ ವೇಳೆ ವೆಂಕಟೇಶ್ ಅಯ್ಯರ್ ಸಂಭ್ರಮಿಸಿದ ಸ್ಟೈಲ್ ನೋಡಿ: ವೈರಲ್ ವಿಡಿಯೋ

 

Follow us on

Click on your DTH Provider to Add TV9 Kannada