ದೇಶದ್ರೋಹದಂಥ ಕಾರ್ಯದಲ್ಲಿ ತೊಡಗುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿದ ಮಾತಿಗೆ ಬದ್ಧನಾಗಿದ್ದೇನೆ: ಕೆ ಎಸ್ ಈಶ್ವರಪ್ಪ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಸರ್ಕಾರವು ಗೂಂಡಾಗಳ ವಿರುದ್ಧ ಕಂಡಲ್ಲಿ ಗುಂಡಿಕ್ಕುವ ಆದೇಶ ಜಾರಿಗೊಳಿಸಿದ ನಂತರವೇ ಅಲ್ಲಿ ಪುಂಡಾಟಗಳು ನಿಂತಿದ್ದು ಎಂದು ಈಶ್ಪರಪ್ಪ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್ ಈ ಎಸ್) ಎಲ್ಲ ರಾಜಕೀಯ ಧುರೀಣರು ವೀರಾವೇಶದಿಂದ ಮಾತಾಡುತ್ತಿದ್ದಾರೆ. ಆದರೆ ಅದನ್ನು ನಿಷೇಧಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಬೆಳಗಾವಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತಾಡಿದ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪನವರು ಕಾಂಗ್ರೆಸ್ ಪಕ್ಷದವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎಮ್ ಈ ಎಸ್ ಅನ್ನು ಬ್ಯಾನ್ ಮಾಡಬೇಕು ಅಂತ ಹೇಳಿದರೆ ಡಿಕೆ ಶಿವಕುಮಾರ್ ಅವರು ಎಮ್ ಈ ಎಸ್ ಅನ್ನು ದೂಷಿಸುವ ಅಗತ್ಯವಿಲ್ಲ ಇದು ಯಾವುದೋ ಪುಂಡರ ಕೆಲಸ ಅಂತ ಹೇಳುತ್ತಾರೆ ಎಂದು ಹೇಳಿದರು. ಲಕ್ಷ್ಮಿಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಮರಾಠಿ ಮಾತಾಡುವ ಜನ ಜಾಸ್ತಿ ಇರುವುದರಿಂದ ಶಿವಕುಮಾರ್ ಹಾಗೆ ಹೇಳುತ್ತಿದ್ದಾರೆ ಎಂದು ಸಚಿವರು ದೂರಿದರು.
ಎಲ್ಲ ಪಕ್ಷಗಳು ಒಕ್ಕೊರಲಿನಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೆ, ಎಮ್ ಈ ಎಸ್ ಅನ್ನು ನಿಷೇಧಿಸುವುದು ಸುಲಭವಾಗುತ್ತದೆ ಎಂದು ಈಶ್ವರಪ್ಪ ಹೇಳಿದರು. ಎಮ್ ಈ ಎಸ್ ಪುಂಡರ ವಿರುದ್ಧ ರಾಷ್ಟ್ರದ್ರೋಹ ಮತ್ತು ಗೂಂಡಾ ಕಾಯಿದೆ ಪ್ರಕರಂಣಗಳನ್ನು ದಾಖಲಿಸುವುದಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ ಸಚಿವರು ಹಿಂದೆ ಅವರು ವಿಧಾನಸಭೆಯಲ್ಲಿ, ದೇಶದ್ರೋಹಿ ಕೆಲಸಗಳಲ್ಲಿ ಭಾಗಿಯಾಗುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ ಮಾತಿಗೆ ಈಗಲೂ ಬದ್ಧರಾಗಿರುವುದಾಗಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಸರ್ಕಾರವು ಗೂಂಡಾಗಳ ವಿರುದ್ಧ ಕಂಡಲ್ಲಿ ಗುಂಡಿಕ್ಕುವ ಆದೇಶ ಜಾರಿಗೊಳಿಸಿದ ನಂತರವೇ ಅಲ್ಲಿ ಪುಂಡಾಟಗಳು ನಿಂತಿದ್ದು ಎಂದು ಈಶ್ಪರಪ್ಪ ಹೇಳಿದರು.
ಬೆಳಗಾವಿಯ ಸುವರ್ಣ ಸೌಧದ ಎದುರು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-ಇಬ್ಬರ ಪ್ರತಿಮೆಗಳನ್ನು ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅವರಿಬ್ಬರ ಜಾತಿ ಯಾವುದು ಅನ್ನೋದು ನಮಗೆ ಮುಖ್ಯವಲ್ಲ, ನಮಗೆ ಮುಖ್ಯವಾಗೋದು ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಅನ್ನುವ ಸಂಗತಿ ಎಂದು ಈಶ್ವರಪ್ಪ ಹೇಳಿದರು.
ಅವರ ನಡುವೆ ತಾಯಿ-ಮಗನ ಸಂಬಂಧವಿತ್ತು, ರಾಯಣ್ಣ ಚೆನ್ನಮ್ಮನನ್ನು ಅಮ್ಮಾ ಎಂದು ಕರೆದರೆ ಚೆನ್ನಮ್ಮ ಮಗನೇ ಎಂದು ಪ್ರತಿಕ್ರಿಯಿಸುತ್ತಿದ್ದರು ಅಂತ ಸಚಿವರು ಹೇಳಿದರು.
ಇದನ್ನೂಓದಿ: ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್