ಹಪ್ಪಳ ಮಾಡುವವರೂ ತೆರಿಗೆ ಪಾವತಿದಾರರು ಅಂತ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ಸರ್ಕಾರ!
ನಗರದ ಮಹಾಲಕ್ಷ್ಮಿ ಲೇಔಟ್ನ ವೃಷಭಾವತಿ ನಗರದಲ್ಲಿ ವಾಸವಾಗಿರುವ ಈ ಕುಟುಂಬ ಉಪ ಜೀವನಕ್ಕಾಗಿ ಹಪ್ಪಳ ಮಾಡುತ್ತದೆ. ಆದರೆ ಟ್ಯಾಕ್ಸ್ ಪಾವತಿಸುತ್ತಾರೆ ಅಂತ ಅವರ ಕಾರ್ಡ್ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್ನಿಂದ ಅವರಿಗೆ ಸಿಗುತ್ತಿದ್ದ ಅಕ್ಕಿ ಮತ್ತು ವೈದ್ಯಕೀಯ ಸೌಲಭ್ಯ ಈಗ ಅಲಭ್ಯವಾಗಿವೆ. ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಯ್ಯ ತಮಗೆ ನೆರವಾಗುವ ನಿರೀಕ್ಷೆಯನ್ನು ಕುಟುಂಬ ಇಟ್ಟುಕೊಂಡಿದೆ.
ಬೆಂಗಳೂರು: ಗ್ಯಾರಂಟಿ ಯೋಜನೆ ಫಲಾನಭವಿಗಳ ಬಿಪಿಎಲ್ ಕಾರ್ಡ್ ಪರಿಷ್ಕರಣೆಯ ಕೆಲಸವನ್ನು ಸರ್ಕಾರ ಭರದಿಂದ ನಡೆಸಿದ್ದು, ಜಿಎಸ್ಟಿ ಮತ್ತು ಆದಾಯ ತೆರಿಗೆ ಕಟ್ಟುತ್ತಿರುವವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿ ಅವರಿಗೆ ಎಪಿಎಲ್ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಆದರೆ ಈ ಕೆಲಸ ಸರಿಯಾಗಿ ಅಗುತ್ತಿಲ್ಲ, ಬಡವರ, ದಿನಗೂಲಿ ಮಾಡುವ ಮತ್ತು ಹಪ್ಪಳ ಮಾಡಿ ಬದುಕು ನಡೆಸುವ ಕುಟುಂಬಗಳು ಆದಾಯ ತೆರಿಗೆ ಪಾವತಿಸುತ್ತಿವೆ ಅಂತ ಅವರ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ರದ್ದು ಮಾಡಿದೆ. ನಗರದ ಅಂಥ ಕೆಲ ಕುಟುಂಬಗಳೊಂದಿಗೆ ನಮ್ಮ ಬೆಂಗಳೂರು ವರದಿಗಾರ ಮಾತಾಡಿದ್ದಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಡ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು: ಪತ್ನಿಗೆ ಬ್ರೈನ್ ಟ್ಯೂಮರ್, ದುಡ್ಡಿಲ್ಲದೆ ಪರದಾಡುತ್ತಿರುವವರ ಮೇಲೆ ಪ್ರಹಾರ
Latest Videos