ಹಪ್ಪಳ ಮಾಡುವವರೂ ತೆರಿಗೆ ಪಾವತಿದಾರರು ಅಂತ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ಸರ್ಕಾರ!

|

Updated on: Nov 20, 2024 | 1:24 PM

ನಗರದ ಮಹಾಲಕ್ಷ್ಮಿ ಲೇಔಟ್​ನ ವೃಷಭಾವತಿ ನಗರದಲ್ಲಿ ವಾಸವಾಗಿರುವ ಈ ಕುಟುಂಬ ಉಪ ಜೀವನಕ್ಕಾಗಿ ಹಪ್ಪಳ ಮಾಡುತ್ತದೆ. ಆದರೆ ಟ್ಯಾಕ್ಸ್ ಪಾವತಿಸುತ್ತಾರೆ ಅಂತ ಅವರ ಕಾರ್ಡ್ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್​ನಿಂದ ಅವರಿಗೆ ಸಿಗುತ್ತಿದ್ದ ಅಕ್ಕಿ ಮತ್ತು ವೈದ್ಯಕೀಯ ಸೌಲಭ್ಯ ಈಗ ಅಲಭ್ಯವಾಗಿವೆ. ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಯ್ಯ ತಮಗೆ ನೆರವಾಗುವ ನಿರೀಕ್ಷೆಯನ್ನು ಕುಟುಂಬ ಇಟ್ಟುಕೊಂಡಿದೆ.

ಬೆಂಗಳೂರು: ಗ್ಯಾರಂಟಿ ಯೋಜನೆ ಫಲಾನಭವಿಗಳ ಬಿಪಿಎಲ್ ಕಾರ್ಡ್ ಪರಿಷ್ಕರಣೆಯ ಕೆಲಸವನ್ನು ಸರ್ಕಾರ ಭರದಿಂದ ನಡೆಸಿದ್ದು, ಜಿಎಸ್​ಟಿ ಮತ್ತು ಆದಾಯ ತೆರಿಗೆ ಕಟ್ಟುತ್ತಿರುವವರ ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಿ ಅವರಿಗೆ ಎಪಿಎಲ್ ಕಾರ್ಡ್​ಗಳನ್ನು ನೀಡಲಾಗುತ್ತಿದೆ. ಆದರೆ ಈ ಕೆಲಸ ಸರಿಯಾಗಿ ಅಗುತ್ತಿಲ್ಲ, ಬಡವರ, ದಿನಗೂಲಿ ಮಾಡುವ ಮತ್ತು ಹಪ್ಪಳ ಮಾಡಿ ಬದುಕು ನಡೆಸುವ ಕುಟುಂಬಗಳು ಆದಾಯ ತೆರಿಗೆ ಪಾವತಿಸುತ್ತಿವೆ ಅಂತ ಅವರ ಬಿಪಿಎಲ್ ಕಾರ್ಡ್​ಗಳನ್ನು ಸರ್ಕಾರ ರದ್ದು ಮಾಡಿದೆ. ನಗರದ ಅಂಥ ಕೆಲ ಕುಟುಂಬಗಳೊಂದಿಗೆ ನಮ್ಮ ಬೆಂಗಳೂರು ವರದಿಗಾರ ಮಾತಾಡಿದ್ದಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಡ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು: ಪತ್ನಿಗೆ ಬ್ರೈನ್ ಟ್ಯೂಮರ್, ದುಡ್ಡಿಲ್ಲದೆ ಪರದಾಡುತ್ತಿರುವವರ ಮೇಲೆ ಪ್ರಹಾರ