ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಚಿಕ್ಕಬಳ್ಳಾಪುರನಲ್ಲಿ ದ್ರಾಕ್ಷಿ ಚಪ್ಪರ ಕುಸಿದು ಬಿದ್ದು ಬೆಳೆಗಾರನಿಗೆ ಲಕ್ಷಾಂತರ ಹಾನಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 17, 2022 | 10:07 PM

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ವೆಂಕಟರೆಡ್ಡಿ ಅವರ ದ್ರಾಕ್ಷಿ ಚಪ್ಪರ ಸಂಪೂರ್ಣವಾಗಿ ಕುಸಿದಿದೆ ಮತ್ತು ದ್ರಾಕ್ಷಿ ಗೊಂಚಲುಗಳು ನೆಲಕಚ್ಚಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಬೇರೆ ದ್ರಾಕ್ಷಿ ಬೆಳೆಗಾರರ ಚಪ್ಪರಗಳು ಸಹ ಕುಸಿದು ಬಿದ್ದು ಹಾಳಾಗಿವೆ.

Chikkaballapur: ಬಿಟ್ಟೂಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆ (Untimely Rain) ರಾಜ್ಯದ ಒಂದು ಭಾಗದಲ್ಲಿ ಮಾತ್ರ ಕೇಡು ಉಂಟುಮಾಡದೆ ತನ್ನ ನಾಶನದ ಹಾವಳಿಯನ್ನು ಹಲವಾರು ಕಡೆಗಳಲ್ಲಿ ಹಬ್ಬಿಸಿದೆ. ಮೈಸೂರು ಭಾಗದಲ್ಲಿ ಮಳೆಯಿಂದ ಏನೇನೆಲ್ಲ ಅಗುತ್ತಿದೆ ಅಂತ ನಾವು ಪ್ರತಿದಿನ ತೋರಿಸುತ್ತಿದ್ದೇವೆ. ಈ ವಿಡಿಯೋ ನಮಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಿಂದ ಲಭ್ಯವಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಚೀಡಚಿಕ್ಕನಹಳ್ಳಿ ಹೆಸರಿನ ಗ್ರಾಮದಲ್ಲಿ ದ್ರಾಕ್ಷಿ ಚಪ್ಪರದ ಸ್ಥಿತಿ ಏನಾಗಿದೆ ನೋಡಿ. ತೋಟವು ವೆಂಕಟರೆಡ್ಡಿ (Venkatreddy) ಎನ್ನುವ ರೈತರಿಗೆ ಸೇರಿದ್ದು. ಅವರನ್ನು ತೋರಿಸುವುದು ನಮಗೆ ಸಾಧ್ಯವಿಲ್ಲ. ಅವರು ಅನುಭವಿಸಿರುವ ಹಾನಿ ಮತ್ತು ನಷ್ಟ ಹಲವು ಲಕ್ಷಗಳಷ್ಟಿದೆ.

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ವೆಂಕಟರೆಡ್ಡಿ ಅವರ ದ್ರಾಕ್ಷಿ ಚಪ್ಪರ ಸಂಪೂರ್ಣವಾಗಿ ಕುಸಿದಿದೆ ಮತ್ತು ದ್ರಾಕ್ಷಿ ಗೊಂಚಲುಗಳು ನೆಲಕಚ್ಚಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಬೇರೆ ದ್ರಾಕ್ಷಿ ಬೆಳೆಗಾರರ ಚಪ್ಪರಗಳು ಸಹ ಕುಸಿದು ಬಿದ್ದು ಹಾಳಾಗಿವೆ.

ಸರ್ಕಾರದಿಂದ ಪರಿಹಾರ ಯಾವಾಗ ಸಿಗುತ್ತದೆಯೋ? ಅಸಲಿಗೆ ಅದು ಸಿಗುತ್ತೋ ಇಲ್ಲವೋ ಎಂಬ ಅನುಮಾನ ಎಲ್ಲ ರೈತರನ್ನು ಕಾಡುತ್ತಿದೆ. ವೆಂಕಟರೆಡ್ಡಿಯವರ ದ್ರಾಕ್ಷಿ ತೋಟ ಹಾಳಾಗಿರುವ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗುವಾಗ ಪೊಲೀಸ್ ದಾಖಲಾತಿ ಬೇಕಾಗುತ್ತದೆ.

ಇದನ್ನೂ ಓದಿ:   ಮೈಸೂರು ಭಾಗದಲ್ಲಿ ಸುರಿಯುತ್ತಿರುವ ಮಳೆ ರೈತರ ಕೈಗೆ ಬಂದ ಫಸಲನ್ನು ಹಾಳು ಮಾಡುತ್ತಿದೆ