ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದೊಳಗೆಲ್ಲಾ ಕಾಡಾನೆಗಳ ಹಿಂಡು ಓಡಾಡುತ್ತಿದೆ. ಮರಿಗಳು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಕಾಫಿ, ಜೋಳ, ಶುಂಠಿ, ಭತ್ತ ಬೆಳೆ ನಾಶ ಮಾಡಿವೆ. ಬೆಳೆ ಕಳೆದುಕೊಂಡು ಕಂಗಾಲಾದ ಅನ್ನದಾತರು ಕಣ್ನೀರು ಹಾಕಿದ್ದಾರೆ.
ಹಾಸನ, ಸೆ.11: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ. ಹಿಂಡು ಹಿಂಡಾಗಿ ಗ್ರಾಮದೊಳಗೆ ಗಜಪಡೆ ಎಂಟ್ರಿ ಕೊಟ್ಟಿದ್ದು ಕಾಡಾನೆ ಕಂಡು ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದ್ದಾರೆ. ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದೊಳಗೆಲ್ಲಾ ಕಾಡಾನೆಗಳ ಹಿಂಡು ಓಡಾಡುತ್ತಿದೆ. ಮರಿಗಳು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಕಾಫಿ, ಜೋಳ, ಶುಂಠಿ, ಭತ್ತ ಬೆಳೆ ನಾಶ ಮಾಡಿವೆ. ಬೆಳೆ ಕಳೆದುಕೊಂಡು ಕಂಗಾಲಾದ ಅನ್ನದಾತರು ಕಣ್ನೀರು ಹಾಕಿದ್ದಾರೆ. ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಕಾಡಾನೆಗಳನ್ನು ಓಡಿಸಲು ಹರ ಸಾಹಸಪಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Sep 11, 2024 02:14 PM