‘ಕರಿಮಣಿ ಮಾಲಿಕ ನೀನಲ್ಲ..’ ಹಾಡು ಹುಟ್ಟಿದ ಸಂದರ್ಭದಲ್ಲಿ ಹರಡಿತ್ತು ಒಂದು ಗಾಸಿಪ್
‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ..’ ಹಾಡು ಹುಟ್ಟಿದ್ದಕ್ಕೆ ಒಂದು ಗಾಸಿಪ್ ಕಾರಣ ಎಂಬ ಮಾತಿದೆ. ಆ ರೂಮರ್ ಇದ್ದಿದ್ದು ನಿಜವೇ ಎಂಬ ಪ್ರಶ್ನೆಗೆ ಗುರುಕಿರಣ್ ಪ್ರತಿಕ್ರಿಯಿಸಿದ್ದಾರೆ. ‘ಶ್ರೀರಾಮನ ಕಾಲದಲ್ಲಿ ಅಗಸ ಏನೋ ಹೇಳಿದ ಅಂತ ರೂಮರ್ಸ್ ಹಬ್ಬಿತ್ತು. ಅಂದಿನಿಂದ ಇಂದಿನ ಕಾಲದವರೆಗೆ ರೂಮರ್ಸ್ ಹಬ್ಬುತ್ತಲೇ ಇದೆ. ಜನರು ಅದನ್ನೇ ಇಷ್ಟಪಡುತ್ತಾರೆ. ಸತ್ಯಕ್ಕಿಂತಲೂ ಗಾಳಿಮಾತಿನಲ್ಲಿ ಹೆಚ್ಚು ಕಿಕ್ ಸಿಗುತ್ತದೆ’ ಎಂದು ಗುರುಕಿರಣ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ‘ಏನಿಲ್ಲ.. ಏನಿಲ್ಲ..’ ಸಾಂಗ್ ವೈರಲ್ ಆಗಿದೆ. ‘ಉಪೇಂದ್ರ’ ಸಿನಿಮಾದ ಆ ಗೀತೆಯಲ್ಲಿನ ‘ಕರಿಮಣಿ ಮಾಲಿಕ ನೀನಲ್ಲ’ (Karimani Malika Ninalla) ಸಾಲನ್ನು ಯುವಕರು ಮೆಚ್ಚಿಕೊಳ್ಳುತ್ತಿದ್ದಾರೆ. ಉಪೇಂದ್ರ ಬರೆದ ಈ ಹಾಡಿಗೆ ಸಂಗೀತ ನೀಡಿದವರು ಗುರುಕಿರಣ್. ಆ ದಿನಗಳನ್ನು ಈಗ ಗುರುಕಿರಣ್ (Gurukiran) ಮೆಲುಕು ಹಾಕಿದ್ದಾರೆ. ‘ಉಪೇಂದ್ರ’ ಸಿನಿಮಾ ತೆರೆಕಂಡಿದ್ದು 1999ರಲ್ಲಿ. ಆ ಸಂದರ್ಭದಲ್ಲಿ ಸಿನಿಮಾದ ನಾಯಕ-ನಾಯಕಿ ಬಗ್ಗೆ ಗಾಸಿಪ್ಗಳು ಹಬ್ಬಿದ್ದವು. ಅದಕ್ಕೆ ಪ್ರತಿಕ್ರಿಯೆ ನೀಡುವ ರೀತಿಯಲ್ಲಿ ‘ಏನಿಲ್ಲ.. ಏನಿಲ್ಲ..’ ಹಾಡು ಮೂಡಿಬಂದಿತ್ತು. ಅದರಲ್ಲಿನ ಕೆಲವು ಸಾಲುಗಳಿಗೆ ಎರಡು ಅರ್ಥಗಳಿದ್ದವು. ಅದರ ಕುರಿತು ಗುರುಕಿರಣ್ ಮಾತನಾಡಿದ್ದಾರೆ. ಆ ಕಾಲದಲ್ಲಿ ‘ಉಪೇಂದ್ರ’ (Upendra) ಸಿನಿಮಾದ ಆಡಿಯೋ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದ್ದವು. ಈಗ 25 ವರ್ಷ ಕಳೆದಿದ್ದರೂ ಕೂಡ ಆ ಸಿನಿಮಾದ ಹಾಡುಗಳು ಜೀವಂತಿಕೆ ಉಳಿಸಿಕೊಂಡಿವೆ. ಕೇಳುಗರ ಫೇವರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ