Kannada News Videos Hamsa became villain to Heaven People In Bigg Boss Kannada Entertainment News In Kannada
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೊದಲು ಕ್ಯಾಪ್ಟನ್ ಆದ ಖುಷಿಯಲ್ಲಿ ಹಂಸ ಇದ್ದರು. ಇದರಿಂದ ಅವರಿಗೆ ಇಮ್ಯುನಿಟಿ ಕೂಡ ಸಿಕ್ಕಿತ್ತು. ಆದರೆ, ಈ ಖುಷಿ ಹೆಚ್ಚು ದಿನ ಇರಲೇ ಇಲ್ಲ. ಎಲ್ಲರೂ ರೂಲ್ಸ್ ಬ್ರೇಕ್ ಮಾಡಿದಾಗ ಇವರು ಸುಮ್ಮನೆ ಇದ್ದರು ಎನ್ನುವ ಕಾರಣಕ್ಕೆ ಅವರ ಇಮ್ಯುನಿಟಿಯನ್ನು ಹಿಂಪಡೆದು ನಾಮಿನೇಟ್ ಮಾಡಲಾಗಿದೆ. ಈಗ ಅವರು ಸ್ವರ್ಗದವರಿಗೆ ವಿಲನ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹಂಸಾ ಅವರು ನರಕದ ಪರ ಎನ್ನುವ ಮಾತಿದೆ. ಇದನ್ನು ನರಕದವರು ಪದೇಪದೇ ಹೇಳುತ್ತಾರೆ. ಇದನ್ನು ತಪ್ಪು ಎಂದು ಹಂಸಾ ಸಾಬೀತು ಮಾಡಲು ಹೊರಟರೇ ಎನ್ನುವ ಪ್ರಶ್ನೆ ಮೂಡಿದೆ. ಟಾಸ್ಕ್ ವೇಳೆ ಹಂಸ ಅವರು ನರಕದ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಈ ತೀರ್ಪಿನಿಂದ ಇಡೀ ಮನೆ ಹೊತ್ತಿ ಉರಿದಿದೆ. ಸ್ವರ್ಗದವರು ಹಂಸಾ ವಿರುದ್ಧ ತಿರುಗಿ ಬಿದ್ದಿದ್ದಾರೆ.