Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆದ್ದು ಬಂದ ಹನುಮಂತನಿಗೆ ಊರವರಿಂದ ಭರ್ಜರಿ ಸ್ವಾಗತ

ಬಿಗ್​ಬಾಸ್ ಗೆದ್ದು ಬಂದ ಹನುಮಂತನಿಗೆ ಊರವರಿಂದ ಭರ್ಜರಿ ಸ್ವಾಗತ

ಮಂಜುನಾಥ ಸಿ.
|

Updated on:Jan 30, 2025 | 8:23 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋನಲ್ಲಿ ಹನುಮಂತು ವಿಜೇತರಾಗಿದ್ದಾರೆ. ಮೊದಲ ರನ್ನರ್ ಅಪ್​ಗಿಂತಲೂ ಕೋಟ್ಯಂತರ ಮತಗಳ ಅಂತರದಲ್ಲಿ ಹನುಮಂತು ಜಯ ಗಳಿಸಿದ್ದಾರೆ. ಬಿಗ್​ಬಾಸ್ ಗೆದ್ದ ಹನುಮಂತನಿಗೆ ಅವರ ಸ್ವಂತ ಊರಲ್ಲಿ ಭಾರಿ ಸ್ವಾಗತ ಕೋರಲಾಗಿದೆ. ಹನುಮಂತ ಸಹ ಊರ ಜನರಿಗೆ ಬಿಗ್​ಬಾಸ್ ಟ್ರೋಫಿ ತೋರಿಸಿ ಖುಷಿ ಪಟ್ಟಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಅನ್ನು ಹನುಮಂತು ಗೆದ್ದಿದ್ದಾರೆ. ಅವರ ಮುಗ್ಧತೆ, ಜಾಣ್ಮೆಯಿಂದ ಆಡಿದ ಪರಿ ಜನರಿಗೆ ಇಷ್ಟವಾಗಿದೆ. ಹನುಮಂತನ ಗ್ರಾಮ್ಯ ಹಿನ್ನೆಲೆ, ಆತನ ಗ್ರಾಮ್ಯ ವರ್ತನೆ ಹಲವರಿಗೆ ಮೆಚ್ಚುಗೆ ಆಗಿತ್ತು. ಇದೀಗ ಬಿಗ್​ಬಾಸ್ ಗೆದ್ದಿರುವ ಹನುಮಂತು ಊರಿಗೆ ವಾಪಸ್ ಆಗಿದ್ದು, ಹನುಮಂತನಿಗೆ ಭಾರಿ ಸ್ವಾಗತವನ್ನು ಊರ ಜನ ನೀಡಿದ್ದಾರೆ. ಹನುಮಂತನ ಮೆರವಣಿಗೆ ಮಾಡುವ ಜೊತೆಗೆ ಸ್ಥಳೀಯ ಸಂಘ ಸಂಸ್ಥೆಗಳು ಹನುಮಂತನಿಗೆ ವಿಶೇಷ ಸನ್ಮಾನವನ್ನು ಸಹ ಮಾಡಿವೆ. ಹನುಮಂತ ಸಹ ತನ್ನ ಬಿಗ್​ಬಾಸ್ ಟ್ರೋಫಿಯನ್ನು ತನ್ನೂರಿನ ಜನರಿಗೆ ತೋರಿಸಿ ಖುಷಿ ಪಟ್ಟಿದ್ದಾರೆ ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 30, 2025 08:18 PM