ಹನುಮಂತನ ಆಗಮನಕ್ಕಾಗಿ ಶಬರಿಯಂತೆ ಕಾದು ನಿಂತಿರುವ ಅಮ್ಮ ಮತ್ತು ಸಹೋದರಿಯರು!
ಸಹೋದರನನ್ನು ಸ್ವಾಗತಿಸಲು ತಮ್ಮ ತಮ್ಮ ಗಂಡನ ಮನೆಯಿಂದ ಬಂದಿರುವ ಅಕ್ಕ ತಂಗಿಯರು ಸಹ ಸಿಹಿತಿಂಡಿಗಳನ್ನು ಮಾಡಿಕೊಂಡು ಬಂದಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಒಬ್ಬ ಅಕ್ಕ, ಹನುಮಂತ ಬಿಗ್ ಬಾಸ್ ನಲ್ಲಿ ತುಂಬ ಚೆನ್ನಾಗಿ ಅಡಿದ, ಅವನು ಅಷ್ಟು ಚೆನ್ನಾಗಿ ಆಡಬಹುದುದೆಂದು ತಾವ್ಯಾರೂ ಅಂದುಕೊಂಡಿರಲಿಲ್ಲ , ಚಿಕ್ಕವನಾಗಿದ್ದಾಗ ಬಹಳ ಕೀಟಲೆ ಸ್ವಭಾವದವನಾಗಿದ್ದ ಎಂದು ಹೇಳುತ್ತಾರೆ.
ಹಾವೇರಿ: ಹೆಚ್ಚು ಕಡಿಮೆ ನಾಲ್ಕು ತಿಂಗಳು ನಂತರ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಹನುಮಂತ ತಮ್ಮೂರಿಗೆ ವಾಪಸ್ಸಾಗುತ್ತಿದ್ದಾರೆ. ಟಿವಿ9 ವರದಿ ಮಾಡುತ್ತಿರುವ ಹಾಗೆ ಹನಮಂತರನ್ನು ಜಿಲ್ಲೆಯ ಸವಣೂರು ಪಟ್ಟಣದಿಂದ ಸುಮಾರು 10 ಕಿಮೀ ದೂರವಿರುವ ಚಿಲ್ಲೂರು ಬಡ್ನಿ ಗ್ರಾಮಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಗುತ್ತಿದೆ. ಇತ್ತ ಅವರ ಮನೆಯಲ್ಲಿ ತಾಯಿ ಮತ್ತು ಅಕ್ಕ ತಂಗಿಯರು ಸ್ವಾಗತಕ್ಕೆ ತಯಾರಾಗಿ ನಿಂತಿದ್ದಾರೆ. ನಮ್ಮ ಹಾವೇರಿ ವರದಿಗಾರ ಹೇಳುವಂತೆ ಹನುಮಂತ ತನ್ನಮ್ಮ ಮಾಡಿದ ಅಡುಗೆಯನ್ನು ಸವಿದು ಬಹಳ ದಿನಗಳಾಗಿದೆ, ಮಗ ಬರುತ್ತಿದ್ದಾನೆ ಅಂತ ಅವರು ಸಿಹಿತಿಂಡಿಗಳನ್ನು ಮಾಡಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ವಿನ್ನರ್ ಹನುಮಂತಗೆ ಚಿನ್ನ ಎನ್ನುವ ಮೋಕ್ಷಿತಾ ಜಗದೀಶ್ಗೆ ಎಂಟರ್ಟೇನರ್ ಅನ್ನುತ್ತಾರೆ!

ಬೇರೆಯವರ ನೆರವಿಲ್ಲದೆ ಮೆಟ್ಟಿಲು ಹತ್ತಿ ಮೊದಲ ಮಹಡಿಗೆ ಹೋದ ಯಡಿಯೂರಪ್ಪ

ಇಂದು ಅಧಿಕಾರ ವಹಿಸಿಕೊಂಡ ದೆಹಲಿ ಸಿಎಂ, ಸಚಿವರಿಂದ ಯಮುನಾ ಘಾಟ್ನಲ್ಲಿ ಆರತಿ

ಗಂಡ ಸತ್ತ ದಿನವೇ ಸಂಚು ಮಾಡಿದ್ರು: ಗುರುಪ್ರಸಾದ್ ಪತ್ನಿ ಸುಮಿತ್ರಾ ನೇರ ಮಾತು

ಪ್ರಧಾನಿ ಮೋದಿಯೊಂದಿಗೆ ಮಾತಾಡುವಾಗ ಆಂಧ್ರ ಡಿಸಿಎಂ ಸಂಕೋಚದ ಮುದ್ದೆಯಾಗಿದ್ದರು
