ಬಿಗ್ ಬಾಸ್ ಸೀಸನ್ 11 ಹನುಮಂತನೇ ಗೆಲ್ಲಲಿ ಅಂತ ನಾನಂದುಕೊಂಡಿದ್ದೆ: ತುಕಾಲಿ ಸಂತೋಷ್
ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತನೇ ಗೆಲ್ಲಬೇಕೆಂದು ತುಕಾಲಿ ಸಂತೋಷ್ ಅಂದುಕೊಂಡಿದ್ದರಂತೆ, ಅದರೆ ಅವರ ಪತ್ನಿ ಮಾನಸ ಅವರಿಗೆ ತ್ರಿವಿಕ್ರಮ ಗೆಲ್ಲಬೇಕೆಂಬ ಅಸೆ ಇತ್ತಂತೆ, ಯಾರು ಗೆದ್ದರೇನಂತೆ? ಗೆದ್ದವರು ನಮಗೆ ದುಡ್ಡು ಕೊಡುತ್ತಾರಾ ಅಂತ ತುಕಾಲಿ ಹೇಳುತ್ತಾರೆ. ಯಾಕೆ ಕೊಡ್ತಾರೆ ಸ್ವಾಮಿ? ನೀವಾಗಲಿ, ಮಾನಸವಾಗಲೀ ಗೆದ್ದಿದ್ದರೆ ಪ್ರೈಜ್ ಮನೀಯನ್ನು ಹಂಚುತ್ತಿದ್ರಾ?
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಾಂಟೆಸ್ಟಂಟ್ ಆಗಿದ್ದ ನಟ ತುಕಾಲಿ ಸಂತೋಷ್ ಇತ್ತೀಚಿನ ದಿನಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ, ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು ಟಿವಿಗಳ ರಿಯಾಲಿಟಿ ಶೋನಲ್ಲೂ ಭಾಗವಹಿಸುತ್ತಿದ್ದಾರೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ಬಿಗ್ ಬಾಸ್ 11 ವಿನ್ನರ್ ಹನುಮಂತನ ಜೊತೆ ಅತ್ಮೀಯ ಒಡನಾಟ ಹೊಂದಿದ್ದಾರೆ. ಪತ್ನಿ ಮಾನಸ, ಹನುಮಂತ ಮತ್ತು ತುಕಾಲಿ ಸಂತೋಷ್ ಜೊತೆಯಾಗಿ ಕೆಲಸ ಮಾಡಿದ್ದಾರಂತೆ. ತುಕಾಲಿ ನಟಿಸಿರುವ ಗಜರಾಮ ಬಿಡುಗಡೆ ಆಗೋದ್ರಲ್ಲಿದೆ ಮತ್ತು ಸುಗ್ಗೀಭವ ರಿಲೀಸ್ಗೆ ರೆಡಿಯಾಗಿದೆ, ರಿಯಾಲಿಟಿ ಶೋ ಮಜಾ ಟಾಕೀಸ್ನಲ್ಲೂ ಅವರು ಅವಕಾಶ ಗಿಟ್ಟಿಸಿದ್ದಾರೆ, ಹಾಗಾಗಿ ಫುಲ್ ಬ್ಯುಸಿ ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:
Published on: Jan 30, 2025 07:36 PM