ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸುವೆ: ರಾಜಾ ವೆಂಕಟಪ್ಪ ನಾಯಕ್

|

Updated on: Jan 27, 2024 | 10:42 AM

ಎಲ್ಲ 135 ಶಾಸಕರಿಗೆ ಸ್ಥಾನಗಳನ್ನು ನೀಡುವುದು ಸಾಧ್ಯವಿಲ್ಲ, ತನ್ನಂತೆ ನಾಲ್ಕೈದು ಬಾರಿ ಆಯ್ಕೆಯಾಗಿರುವವರು ಸಾಕಷ್ಟು ಜನರಿದ್ದಾರೆ, ಹಾಗಾಗಿ ವರಿಷ್ಠರು ನೀಡಿರುವ ಜವಾಬ್ದಾರಿಯ ಬಗ್ಗೆ ತೃಪ್ತಿ ಇದೆ ಅದನ್ನು ಪ್ರಾಮಾಣಿಕತೆ ಮತ್ತು ಮುತುವರ್ಜಿಯಿಂದ ನಿಭಾಯಿಸುವುದಾಗಿ ಶಾಸಕ ನಾಯಕ್ ಹೇಳಿದರು.

ಯಾದಗಿರಿ: ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಯನ್ನು ಸಿದ್ದರಾಮಯ್ಯ ಸರ್ಕಾರ (Siddaramaiah government) ಬಿಡುಗಡೆ ಮಾಡಿದ್ದು ಜಿಲ್ಲೆಯ ಸುರಪುರ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ಉಗ್ರಾಣ ನಿಗಮದ (State warehousing Corporation) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಟಿವಿ9 ವಾಹಿನಿಯ ಯಾದಗಿರಿ ವರದಿಗಾರನೊಂದಿಗೆ ಮಾತಾಡಿರುವ ಶಾಸಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಉಗ್ರಾಣ ನಿಗಮದ ಜವಾಬ್ದಾರಿ ತನಗೆ ನೀಡಿರುವುದಕ್ಕೆ ನಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಸಚಿವ ಸ್ಥಾನಕ್ಕೆ ಸಿಗದಿರುವುದಕ್ಕೆ ಅಸಮಾಧಾನವೇನೂ ಇಲ್ಲ ಎಂದ ಶಾಸಕ ಎಲ್ಲ 135 ಶಾಸಕರಿಗೆ ಸ್ಥಾನಗಳನ್ನು ನೀಡುವುದು ಸಾಧ್ಯವಿಲ್ಲ, ತನ್ನಂತೆ ನಾಲ್ಕೈದು ಬಾರಿ ಆಯ್ಕೆಯಾಗಿರುವವರು ಸಾಕಷ್ಟು ಜನರಿದ್ದಾರೆ, ಹಾಗಾಗಿ ವರಿಷ್ಠರು ನೀಡಿರುವ ಜವಾಬ್ದಾರಿಯ ಬಗ್ಗೆ ತೃಪ್ತಿ ಇದೆ ಅದನ್ನು ಪ್ರಾಮಾಣಿಕತೆ ಮತ್ತು ಮುತುವರ್ಜಿಯಿಂದ ನಿಭಾಯಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ