‘ಒಂದು ಕೊರಗು ಇತ್ತು ಅನ್ಸುತ್ತೆ’: ಡೇನಿಯಲ್ ಬಾಲಾಜಿ ಅಕಾಲಿಕ ಮರಣಕ್ಕೆ ಸಂತು ಪ್ರತಿಕ್ರಿಯೆ
ನಟ ಡೇನಿಯಲ್ ಬಾಲಾಜಿ ನಿಧನಕ್ಕೆ ನಿರ್ದೇಶಕ ಹರಿ ಸಂತೋಷ್ ಅವರು ಕಂಬನಿ ಮಿಡಿದಿದ್ದಾರೆ. ಡೇನಿಯಲ್ ಬಾಲಾಜಿ ಜೊತೆ ಸಂತೋಷ್ ಅವರು ಒಡನಾಟ ಹೊಂದಿದ್ದರು. ಹಲವು ಸಿನಿಮಾಗಳ ಬಗ್ಗೆ ಅವರು ಚರ್ಚೆ ಮಾಡಿದ್ದರು. ಈಗ ದಿಢೀರ್ ಅಂತ ಡೇನಿಯಲ್ ಬಾಲಾಜಿ ನಿಧನರಾಗಿರುವುದು ಸಂತೋಷ್ ಅವರಿಗೆ ಆಘಾತ ಉಂಟು ಮಾಡಿದೆ.
ಖ್ಯಾತ ನಟ ಡೇನಿಯಲ್ ಬಾಲಾಜಿ (Daniel Balaji) ಅವರು ಕೇವಲ 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಎದೆನೋವು ಕಾಣಿಸಿಕೊಂಡ ಬಳಿಕ ಅವರು ವಿಧಿವಶರಾಗಿದ್ದಾರೆ. ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಅವರು ಫೇಮಸ್ ಆಗಿದ್ದರು. ಡೇನಿಯಲ್ ಬಾಲಾಜಿ ಅವರ ನಿಧನಕ್ಕೆ (Daniel Balaji Death) ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಕನ್ನಡದ ‘ಡವ್’ ಸಿನಿಮಾದಲ್ಲಿ ಡೇನಿಯಲ್ ಬಾಲಾಜಿ ನಟಿಸಿದ್ದರು. ಆ ಸಿನಿಮಾಗೆ ಹರಿ ಸಂತೋಷ್ (Hari Santhosh) ನಿರ್ದೇಶನ ಮಾಡಿದ್ದರು. ಅಗಲಿದ ನಟನ ಬಗ್ಗೆ ಸಂತು ಅವರು ಮಾತನಾಡಿದ್ದಾರೆ. ‘ನಾನು ಡೈರೆಕ್ಟರ್ ಆಗಬೇಕು ಅಂತ ಬಂದವನು’ ಎಂದು ಡೇನಿಯಲ್ ಬಾಲಾಜಿ ಅವರು ಸಂತು ಬಳಿ ಹೇಳಿಕೊಂಡಿದ್ದರು. ಆದರೆ ನಿರ್ದೇಶನಕ್ಕೆ ಅವಕಾಶ ಸಿಗದೇ ನಟನಾಗಿ ಅವರು ಮುಂದುವರಿದಿದ್ದರು. ‘ನಿರ್ದೇಶನದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಅವರಿಗೆ ಇತ್ತು. ಡೈರೆಕ್ಟರ್ ಆಗಬೇಕು ಎಂಬ ಗುರಿ ಸಾಧಿಸಲು ಆಗಲಿಲ್ಲ ಎಂಬ ಕೊರಗು ಇತ್ತು ಎನಿಸುತ್ತದೆ’ ಎಂದು ಹರಿ ಸಂತು ಅವರು ಹೇಳಿದ್ದಾರೆ. ‘ಒಳ್ಳೆಯ ಪ್ರತಿಭಾವಂತ ನಟ. ಜೀವನವನ್ನು ಕಲೆಗೆ ಮುಡಿಪಾಗಿಟ್ಟಿದ್ದರು. ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟ’ ಎಂದಿದ್ದಾರೆ ಹರಿ ಸಂತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.