ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ

Edited By:

Updated on: Jul 06, 2025 | 3:17 PM

‘ನಾನು ಹೈದರಾಬಾದ್​ನವಳು’ ಎಂದು ಒಮ್ಮೆ ರಶ್ಮಿಕಾ ಮಂದಣ್ಣ ಹೇಳಿದ್ದರು. ಅದನ್ನು ಸಾಕಷ್ಟು ಜನರು ಟೀಕಿಸಿದ್ದರು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಹರ್ಷಿಕಾ ಪೂಣಚ್ಚ ಅವರು ಈಗ ಮಾತನಾಡಿದ್ದಾರೆ. ‘ನಾವು ಎಷ್ಟೇ ಬೆಳೆದರೂ ಕೂಡ ನಮ್ಮ ಕಾಲು ಯಾವಾಗಲೂ ನೆಲದ ಮೇಲೆ ಇರಬೇಕು’ ಎಂದು ಹರ್ಷಿಕಾ ಅವರು ಹೇಳಿದ್ದಾರೆ.

‘ನಾನು ಹೈದರಾಬಾದ್​ನವಳು’ ಎಂದು ಒಮ್ಮೆ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿದ್ದರು. ಅದನ್ನು ಸಾಕಷ್ಟು ಜನರು ಟೀಕಿಸಿದ್ದರು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಹರ್ಷಿಕಾ ಪೂಣಚ್ಚ ಅವರು ಈಗ ಮಾತನಾಡಿದ್ದಾರೆ. ‘ನಾವು ಎಷ್ಟೇ ಬೆಳೆದರೂ ಕೂಡ ನಮ್ಮ ಕಾಲು ಯಾವಾಗಲೂ ನೆಲದ ಮೇಲೆ ಇರಬೇಕು. ನಾವು ಹುಟ್ಟಿರುವ ಜಾಗವನ್ನು, ನಮ್ಮ ಮೂಲವನ್ನು ನಾವು ಯಾವಾಗಲೂ ಮರೆಯಬಾರದು. ನಮ್ಮ ಮೊದಲ ನಿರ್ದೇಶಕರು ಯಾರು? ನಮಗೆ ಮೊದಲು ಅವಕಾಶ ಕೊಟ್ಟಿದ್ದು ಯಾರು ಎಂಬುದನ್ನು ಮರೆಯಬಾರದು. ಅದು ತುಂಬಾ ಮುಖ್ಯವಾಗುತ್ತದೆ’ ಎಂದು ಹರ್ಷಿಕಾ ಪೂಣಚ್ಚ (Harshika Poonacha) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.