ದಿನೇ ದಿನೇ ಖಾಲಿಯಾಗುತ್ತಿದೆ ಹೇಮಾವತಿ ಒಡಲು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ
ಹೇಮಾವತಿ ನೀರು ಸದ್ದಿಲ್ಲದೆ ನಾಲೆ ಮೂಲಕ ನಾನಾ ಕಡೆಯ ಕೆರೆ, ಕಟ್ಟೆಗೆ ಹರಿಯುತ್ತಿದೆ. ಹೀಗಾಗಿ ಹೇಮಾವತಿ ಜಲಾಶಯದ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಹಾಸನ, ಸೆ.13: ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ನೀರು ದಿನೇದಿನೆ ಖಾಲಿಯಾಗುತ್ತಿದೆ. ಹೇಮಾವತಿ(Hemavati Dam) ನೀರು ಸದ್ದಿಲ್ಲದೆ ನಾಲೆ ಮೂಲಕ ನಾನಾ ಕಡೆಯ ಕೆರೆ, ಕಟ್ಟೆಗೆ ಹರಿಯುತ್ತಿದೆ. ಹೀಗಾಗಿ ಹೇಮಾವತಿ ಜಲಾಶಯದ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಕಳೆದ 1 ತಿಂಗಳಿನಿಂದ ಹೇಮಾವತಿ ಜಲಾಶಯದಿಂದ ಪ್ರತಿನಿತ್ಯ 6000 ಕ್ಯೂಸೆಕ್ ನೀರು ಹರಿಯುತ್ತಿದೆ. ತುಮಕೂರು, ಮಂಡ್ಯ ಭಾಗದ ನಾಲೆಗಳಿಗೆ 4700 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್ಎಸ್ ಡ್ಯಾಂಗೆ ಪ್ರತಿನಿತ್ಯ 1200ರಿಂದ 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. 37 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 19 ಟಿಎಂಸಿ ನೀರು ಇದೆ. ಹಾಸನದ ನಿವಾಸಿಗಳಿಗೆ ಕುಡಿಯುವ ನೀರಿಗೆ ತತ್ವಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಇನ್ನು 19 ಟಿಎಂಸಿಯಲ್ಲಿ 15 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯ. ಪ್ರತಿನಿತ್ಯ ನೀರು ಹರಿಸುತ್ತಾ ಹೋದ್ರೆ ಎರಡು ತಿಂಗಳೊಳಗೆ ಡ್ಯಾಂ ಖಾಲಿಯಾಗಲಿದೆ. ಕೆಆರ್ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ರೆ ಇನ್ನೂ ಬೇಗ ನೀರು ಖಾಲಿಯಾಗಲಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ