Hassan News: ಆಸ್ತಿ ಕಲಹಕ್ಕೆ ಧರೆಗುರುಳಿದ 30 ವರ್ಷ ಹಳೆಯ ತೆಂಗಿನಮರಗಳು

Hassan News: ಆಸ್ತಿ ಕಲಹಕ್ಕೆ ಧರೆಗುರುಳಿದ 30 ವರ್ಷ ಹಳೆಯ ತೆಂಗಿನಮರಗಳು

ಆಯೇಷಾ ಬಾನು
|

Updated on:Jun 04, 2023 | 12:02 PM

ನಂಜಮ್ಮ ಎಂಬ ವೃದ್ದೆಗೆ ಸೇರಿದ ತೆಂಗಿನಮರಗಳನ್ನು ಕಡಿದು ಹಾಕಲಾಗಿದೆ. ಗ್ರಾಮದ ರಾಮಯ್ಯ ಹಾಗೂ ಮಂಜುನಾಥ ಎಂಬುವವರು ಮರ ಕಡಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜಮ್ಮಗೆ ಸೇರಿರುವ ಮೂರು ಎಕರೆ ಮೂವತ್ತಾರು ಗುಂಟೆ ಜಮೀನು ತಮಗೆ ಸೇರಿದೆ ಎಂದು ರಾಮಯ್ಯ ವಾದ ಮಾಡ್ತಿದ್ದಾರೆ.

ಹಾಸನ: ಎರಡು ಕುಟುಂಬಗಳ ನಡುವೆ ಆಸ್ತಿ ಕಲಹವಿದ್ದು ಕಣ್ಣು ಮುಂದೆಯೇ ಬೃಹತ್ ತೆಂಗಿನ ಮರಗಳನ್ನು ನಾಶ ಮಾಡಿದ ಆರೋಪ ಕೇಳಿ ಬಂದಿದೆ. ಮೂವತ್ತು ವರ್ಷಗಳ ಹಳೆಯ ತೆಂಗಿನಮರಗಳನ್ನು ಕಳೆದುಕೊಂಡು ವಯೋವೃದ್ದೆ ಕಂಗಾಲಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ ಸಾಣೇನಹಳ್ಳಿ ಗ್ರಾಮದಲ್ಲಿ ನಂಜಮ್ಮ ಎಂಬ ವೃದ್ದೆಗೆ ಸೇರಿದ ತೆಂಗಿನಮರಗಳನ್ನು ಕಡಿದು ಹಾಕಲಾಗಿದೆ. ಗ್ರಾಮದ ರಾಮಯ್ಯ ಹಾಗೂ ಮಂಜುನಾಥ ಎಂಬುವವರು ಮರ ಕಡಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜಮ್ಮಗೆ ಸೇರಿರುವ ಮೂರು ಎಕರೆ ಮೂವತ್ತಾರು ಗುಂಟೆ ಜಮೀನು ತಮಗೆ ಸೇರಿದೆ ಎಂದು ರಾಮಯ್ಯ ವಾದ ಮಾಡ್ತಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published on: Jun 04, 2023 12:02 PM