ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: 4 ಗಂಟೆ ಕಾಲ ನಡೆದ ಸ್ಥಳ ಮಹಜರು ಅಂತ್ಯ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್ನ ತನಿಖೆ ಚುರುಕುಗೊಂಡಿದೆ. ಇವತ್ತು ಹಾಸನದ ಹೊಳೆನರಸೀಪುರದಲ್ಲಿರೋ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮುಗಿಸಿದೆ. ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳು ಚೆನ್ನಾಂಬಿಕಾ ನಿವಾಸಕ್ಕೆ ಎಂಟ್ರಿಕೊಟ್ಟಿದ್ದರು. ಆರೋಪಿ ಪ್ರಜ್ವಲ್ ರೇವಣ್ಣನ ಕರೆತಂದು ಸತತ 4 ಗಂಟೆಗಳ ಕಾಲ ಚೆನ್ನಾಂಬಿಕಾ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದರು.
ಹಾಸನ, ಜೂನ್ 08: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್ನ ತನಿಖೆ ಚುರುಕುಗೊಂಡಿದೆ. 34 ದಿನಗಳ ಕಾಲ ವಿದೇಶದಲ್ಲೇ ಕಣ್ಣಾಮುಚ್ಚಾಲೆ ಆಡಿದ್ದ ಪ್ರಜ್ವಲ್ಗೆ ಎಸ್ಐಟಿ ಈಗ ಫುಲ್ ಗ್ರಿಲ್ ಮಾಡುತ್ತಿದೆ. ಇವತ್ತು ಹಾಸನದ ಹೊಳೆನರಸೀಪುರದಲ್ಲಿರೋ (Holenarasipur) ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮುಗಿಸಿದೆ. ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳು ಚೆನ್ನಾಂಬಿಕಾ ನಿವಾಸಕ್ಕೆ ಎಂಟ್ರಿಕೊಟ್ಟಿದ್ದರು. ಆರೋಪಿ ಪ್ರಜ್ವಲ್ ರೇವಣ್ಣನ ಕರೆತಂದು ಸತತ 4 ಗಂಟೆಗಳ ಕಾಲ ಚೆನ್ನಾಂಬಿಕಾ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಎಫ್ಎಸ್ಎಲ್ ತಂಡ ತಾಂತ್ರಿಕ ಸಾಕ್ಷಿಗಳನ್ನ ಕಲೆ ಹಾಕಿತು. ಪೆನ್ಡ್ರೈವ್ ಹೊರ ಬಿದ್ದ 43 ದಿನಗಳ ಬಳಿಕ ಪ್ರಜ್ವಲ್ ರೇವಣ್ಣಗೆ ಹೊಳೆನರಸೀಪುರದ ದರ್ಶನವಾಯಿತು. ಆದರೆ ಪೊಲೀಸ್ ವ್ಯಾನ್ನಲ್ಲಿದ್ದ ಪ್ರಜ್ವಲ್, ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬೀಳದಂತೆ ಸೀಟ್ ಮೇಲೆ ಅಡಗಿ ಮಲಗಿದ್ದ. ಇತ್ತ ಚೆನ್ನಾಂಬಿಕಾ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಹಜರು ಮುಗಿಸಿ ವಾಪಸ್ ಹೊರಡುವಾಗ ಪ್ರಜ್ವಲ್ ಬೆಂಬಲಿಗರು ಜೈಕಾರ ಕೂಗಿದ್ದರು. ಸದ್ಯ ಎಸ್ಐಟಿ ತನಿಖಾ ತಂಡ ಚೆನ್ನಾಂಬಿಕಾ ನಿವಾಸದಲ್ಲಿ ಮಾತ್ರ ಸ್ಥಳ ಮಹಜರು ಪೂರ್ಣಗೊಳಿಸಿದೆ. ಇನ್ನೂ ಎಂಪಿ ಬಂಗಲೆಯಲ್ಲೂ ಮಹಜರು ನಡೆಯುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್: ಸಿಎಂ ಶಾಂತಿ ಭಾಷಣ

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ

ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ

ಇಂದೋರ್ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
