ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನ ಜಿಲ್ಲೆಯ ಮಾನ ಹರಾಜಾಯಿತು: ಡಿ ದೇವರಾಜೇಗೌಡ, ವಕೀಲ

|

Updated on: Jul 02, 2024 | 9:12 PM

ದೇವರಾಜೇಗೌಡರಿಗೆ ಫುಲ್ ಟೈಮ್ ರಾಜಕಾರಣಿಯಾಗುವ ಉದ್ದೇಶ ಇರುವಂತಿದೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಮಾವೇಶವನ್ನು ಹಾಸನದಲ್ಲಿ ನಡೆಸಿ ನಗರಸಭೆ ಮತ್ತು ಸ್ಥಳೀಯ ಸಂಃಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿ ಅವರು ಹೊಂದಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಹೆಚ್ಚೇನೂ ಮಾತಾಡಲಿಲ್ಲ.

ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ಅತ್ಯಾಚಾರದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ 51ದಿನಗಳ ನಂತರ ಹೈಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆ ಹೊಂದಿರುವ ವಕೀಲ ಡಿ ದೇವರಾಜೇಗೌಡ ಪತ್ರಿಕಾ ಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದರು. ತಾನು ಜೈಲಿಲ್ಲಿದ್ದಾಗ ಬೆಂಬಲ ವ್ಯಕ್ತಪಡಿಸಿದ, ಬಿಡುಗಡೆಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಿದ ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತು ಹಾಸನ ಜಿಲ್ಲೆಯ ವಕೀಲರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ತನ್ನ ಬಂಧನದ ಹಿಂದೆ ಯಾರ ಮತ್ತು ಯಾವ ಷಡ್ಯಂತ್ರವಿತ್ತು ಅನ್ನೋದನ್ನು ಮುಂದೊಂದು ತಿಳಿಸ್ತೀನಿ ಎಂದು ಹೇಳಿದ ಅವರು ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಇಡೀ ಹಾಸಕನ ಜಿಲ್ಲೆಯ ಮಾನ ಹರಾಜಾಯಿತು ಎಂದರು. ಲೋಕಸಭಾ ಅಧಿವೇಶನದ ನಂತರ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಅವರನ್ನು ಹಾಸನಕ್ಕೆ ಆಹ್ವಾನಿಸುವುದಾಗಿ ದೆವರಾಜೇಗೌಡ ಹೇಳಿದರು. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ನಾಯಕರು ಮತ್ತು ಲಕ್ಷಾಂತರ ಕಾರ್ಯಕರ್ತರ ಒಂದು ಬೃಹತ್ ಸಮಾವೇಶವನ್ನು ಅಯೋಜಿಸಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮತ್ತು ಕೇಂದ್ರದಲ್ಲಿ ರಾಜ್ಯದಿಂದ ಮಂತ್ರಿಯಾಗಿರುವವರನ್ನು ಸತ್ಕರಿಸುವ ಕಾರ್ಯಕ್ರಮ ನಡೆಸುತ್ತೇನೆ ಎಂದು ವಕೀಲ ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪ್ರಜ್ವಲ್ ರೇವಣ್ಣ​ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ವಕೀಲ ದೇವರಾಜೇಗೌಡಗೆ ಬಿಗ್​ ರಿಲೀಫ್​

Follow us on