ಮನೆ ಖರೀದಿಸುವ ಯೋಜನೆ ಇದೆಯೇ, ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ
ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಸಾಲದ ಒಟ್ಟು ಪ್ರಮಾಣದಲ್ಲಿ 14ಲಕ್ಷ ಕೋಟಿ ರೂ. ಗೃಹ ಸಾಲದ್ದಾಗಿರುತ್ತದೆ. ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಕ್ ನಿಮ್ಮ ಸಾಲದ ಚರಿತ್ರೆ ವರದಿಯನ್ನು ಪರಿಶೀಲಿಸುತ್ತದೆ.
ಬಹುತೇಕ ಮಂದಿ ತಮ್ಮ ಮನೆ ಖರೀದಿಸುವ ಕನಸನ್ನು ಸಾಲ ತೆಗೆದುಕೊಳ್ಳುವ ಮೂಲಕ ನನಸು ಮಾಡಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಗೃಹ ಸಾಲ (Home Loan) ತೆಗೆದುಕೊಳ್ಳುವುದು ಸುಲಭವಲ್ಲ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಸಾಲದ ಒಟ್ಟು ಪ್ರಮಾಣದಲ್ಲಿ 14ಲಕ್ಷ ಕೋಟಿ ರೂ. ಗೃಹ ಸಾಲದ್ದಾಗಿರುತ್ತದೆ. ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಕ್ ನಿಮ್ಮ ಸಾಲದ ಚರಿತ್ರೆ ವರದಿಯನ್ನು ಪರಿಶೀಲಿಸುತ್ತದೆ. ಈ ವರದಿ ನಿಮ್ಮ ವ್ಯವಹಾರವನ್ನು ಆಧರಿಸಿರುತ್ತದೆ. ನೀವು ಮನೆ ಖರೀದಿಸಲು ನಿರ್ಧರಿಸುವ ಮೊದಲು ನಿಮ್ಮ ಕ್ರೆಡಿಟ್ ಹಿಸ್ಟರಿ ಬಗ್ಗೆ ಮಾಹಿತಿ ಪಡೆಯುವುದು ಅತಿ ಮುಖ್ಯ. ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆ ತೃಪ್ತಿಯಿದಲ್ಲಿ, ನಿಮ್ಮ ಗೃಹ ಸಾಲವನ್ನು ಮೊದಲೇ ಪೂರ್ಣಗೊಳಿಸಿ. ಇದರಿಂದ ನಿಮಗೆ ಎಷ್ಟು ಗೃಹ ಸಾಲ ದೊರೆಯುತ್ತದೆ ಎಂದು ಒಂದು ಅಂದಾಜಾಗುತ್ತದೆ.
ಇದನ್ನೂ ಓದಿ:
ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಸ್ವಪಕ್ಷೀಯರಿಂದಲೇ ಹೆಚ್ಚಿನ ಒತ್ತಡ