ಎಲೆಕ್ಟ್ರಿಕ್ ಬಸ್; ಸರ್ಕಾರವನ್ನು ಟೀಕಿಸುತ್ತಿರುವ ಕುಮಾರಸ್ವಾಮಿಯನ್ನು ಈಗಾಗಲೇ ಭೇಟಿಯಾಗಿದ್ದೇನೆ: ರಾಮಲಿಂಗಾರೆಡ್ಡಿ
ಬೆಂಗಳೂರುನಂಥ ಮಹಾನಗರಕ್ಕೆ ನಿಸ್ಸಂದೇಹವಾಗಿ ವಿದ್ಯುತ್ ಚಾಲಿತ ಬಸ್ಗಳ ಅವಶ್ಯಕತೆಯಿದೆ. ಪರಿಸರ ಮಾಲಿನ್ಯ ಇಲಾಖೆ ನೀಡುವ ಮಾಹಿತಿ ಪ್ರಕಾರ ಬೆಂಗಳೂರು ನಿವಾಸಿಗಳು ಪ್ರತಿದಿನ ಸೇವಿಸುವ ವಾಯುವಿನ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ ಮತ್ತು ಬೆಂಗಳೂರು ದೆಹಲಿಯಂತಾಗಲು ಹೆಚ್ಚಿನ ಸಮಯವೇನೂ ಬೇಕಿಲ್ಲ. ಹಾಗಾಗಿ, ಬಿಎಂಟಿಸಿ ತನ್ನ ಹಳೆಯ ಬಸ್ಗಳಿಗೆ ಮುಕ್ತಿನೀಡಿ ಎಲೆಕ್ಟ್ರಿಕ್ ಬಸ್ಗಳ ಮೊರೆಹೊಕ್ಕರೆ ಪರಿಸರ ಮಾಲಿನ್ಯವನ್ನು ಕೊಂಚ ತಗ್ಗಿಸಬಹುದು.
ಬೆಂಗಳೂರು, ಮೇ 31: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 4,500 ಎಲೆಕ್ಟ್ರಿಕ್ ಬಸ್ಗಳು ಸಿಕ್ಕಿವೆ, ಅದರೆ ವಾಹನಗಳು ಸಿಕ್ಕ ನಂತರ ರಾಜ್ಯಸರ್ಕಾರದಿಂದ ಒಂದು ಅಭಿನಂದನೆ, ಧನ್ಯವಾದ ಕೂಡ ಇಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕಮಾರಸ್ವಾಮಿ (HD Kumaraswamy) ಟೀಕಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತಾನೇ ಖುದ್ದಾಗಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದಾಗಿ ಹೇಳಿದರು. ಗ್ರಾಸ್ ಕಾಸ್ಟ್ ಕಂಟ್ರ್ಯಾಕ್ಟ್ ಸ್ಕೀಮಿನಡಿ ರಾಜ್ಯಕ್ಕೆ 4,500 ಎಲೆಕ್ಟ್ರಿಕ್ ಬಸ್ ಸಿಕ್ಕಿರೋದು ಸತ್ಯ, ರಾಜ್ಯ ಸರ್ಕಾರ 10,000 ಬಸ್ಗಳಿಗೆ ಬೇಡಿಕೆಯಿಟ್ಟಿತ್ತು, ಕೇಂದ್ರವು 7,500 ಬಸ್ಗಳನ್ನು ನೀಡುವ ಭರವಸೆ ನೀಡಿತ್ತು, ಅದರೆ 4,500 ಬಸ್ಗಳನ್ನು ಮಾತ್ರ ನೀಡಿದೆ, ಅವರು ನೀಡಿರುವ ಬಸ್ಗಳನ್ನು ಖಾಸಗಿ ಸಂಸ್ಥೆಗಳು ಆಪರೇಟ್ ಮಾಡುತ್ತವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಇದನ್ನೂ ಓದಿ: ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್: ಲಾರಿ ಮಾಲೀಕರ ಮುಷ್ಕರ ವಾಪಸ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ