ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರ ಗ್ರಾಮದ ರೈತ ಕುಟುಂಬದ ಹುಡುಗಿ. ರಾಣೆಬೆನ್ನೂರಿನಲ್ಲಿ ನರ್ಸಿಂಗ್ ಮಾಡಿಕೊಂಡು ಅದೇ ಸಂಸ್ಥೆಯ ಆಸ್ಪತ್ರೆಯಲ್ಲಿ ನರ್ಸ ಆಗಿ ಸೇವೆಯಲ್ಲಿದ್ದಳು. ಕಾರ್ ನಲ್ಲಿ ರಟ್ಟಿಹಳ್ಳಿ ಪಾಳು ಜಮೀನಿಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರಮುಖ ಆರೋಪಿ ನಯಾಜ್ ಬೆಣ್ಣಿಗೇರಿ. ಇತನಿಗೆ ಸಾಥ್ ಕೊಟ್ಟ ಸ್ನೇಹಿತರು ವಿನಾಯಕ ಪೂಜಾರಿ ಹಾಗೂ ದುರ್ಗಾಚಾರಿ ಬಡಿಗೇರಿ. ಇಂತಹ ದುಷ್ಟರ ಕೃತ್ಯ ಖಂಡಿಸಿ ಎಂದು ಪ್ರತಿಭಟನೆಗಳು ನಡೆದಿವೆ.
ಹಾವೇರಿ, (ಮಾರ್ಚ್ 17): ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರ ಗ್ರಾಮದ ರೈತ ಕುಟುಂಬದ 22 ವರ್ಷದ ಶ್ವಾತಿ ಬ್ಯಾಡಗಿ ಕೊಲೆಯಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಗಳು ವ್ಯಕ್ತವಾಗಿವೆ. ಈ ಸಂಬಂಧ ರಾಣೆಬೆನ್ನೂರಿನಲ್ಲಿಂದು ಬೃಹತ್ ಪ್ರತಿಭಟನೆ ನಡೆದಿದ್ದು, ಹತ್ತಕ್ಕೂ ಹೆಚ್ಚು ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಸ್ವಾತಿ ಹತ್ಯೆಗೈದ ಆರೋಪಿಗಳಾದ ನಯಾಜ್, ದುರ್ಗಾಚಾರಿ, ವಿನಯ್ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಇನ್ನೊಂದೆಡೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೊಲೆಯಾದ ಸ್ವಾತಿ ಗೆಳತಿ ಅನು ಪ್ರತಿಕ್ರಿಯಿಸಿ. ಕಳೆದ ಐದು ವರ್ಷಗಳ ಹಿಂದೆ ನನಗೆ ಸ್ವಾತಿ ಪರಿಚಯ. ಹಿಂದೂ ಸಂಘಟನೆಯ ಹೋರಾಟ ನೋಡಿ ಪರಿಚಯ ಮಾಡಿಕೊಂಡಿದ್ದಳು. ದುರ್ಗಾಪೂಜೆ ಸೇರಿದಂತೆ ಅನೇಕ ಕಾರ್ಯಕ್ರಮದಲ್ಲಿ ನನ್ನ ಜೊತೆ ಭಾಗಿಯಾಗಿದ್ದಾಳೆ. ಆಮೇಲೆ ನರ್ಸಿಂಗ್ ಓದುತ್ತಿದ್ದ ವೇಳೆ ಸಂಘಟನೆಯ ಕೆಲಸದಿಂದ ಸ್ವಲ್ಪ ದೂರ ಆದಳು. ಹೋರಿ ಹಬ್ಬ ಅವಳಿಗೆ ಪಂಚಪ್ರಾಣ. ಹೋರಿ ಹಬ್ಬವನ್ನ ನೋಡಲು ಹೋಗುತ್ತಿದ್ಲು. ಆರೋಪಿಗಳನ್ನ ನಮ್ಮ ಕೈಯಲ್ಲಿ ಕೊಡಿ ನಾವು ಶಿಕ್ಷೆ ಕೊಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.