ಹಾಸನ ಪೊಲೀಸರಿಂದ ನೋಟಿಸ್: ಕುಮಾರಸ್ವಾಮಿ ಕೆಂಡಾಮಂಡಲ

Updated on: Nov 24, 2026 | 8:45 PM

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಪೊಲೀಸ್ ನೋಟಿಸ್ ನೀಡಿದೆ.ಜಿಲ್ಲಾಧಿಕಾರಿಗಳು ನೀಡಿದ ದೂರಿನ ಅನ್ವಯ ಕುಮಾರಸ್ವಾಮಿ ಅವರ ನಿವಾಸಕ್ಕೆ ನೋಟಿಸ್ ಹಿಡಿದು ಬಂದಿದ್ದ ಹಾಸನ ಸೈಬರ್ ಕ್ರೈಮ್‌ ಪೊಲೀಸರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನೋಟಿಸ್ ಸ್ವೀಕರಿಸದೇ ವಾಪಸ್ ಕಳಿಸಿದ್ದಾರೆ. ಬಳಿಕ ದೆಹಲಿಗೆ ತೆರಳಿದ್ದು, ಅಲ್ಲಿಂದಲೇ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನವದೆಹಲಿ, (ನವೆಂಬರ್ 24): ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಪೊಲೀಸ್ ನೋಟಿಸ್ ನೀಡಿದೆ.ಜಿಲ್ಲಾಧಿಕಾರಿಗಳು ನೀಡಿದ ದೂರಿನ ಅನ್ವಯ ಕುಮಾರಸ್ವಾಮಿ ಅವರ ನಿವಾಸಕ್ಕೆ ನೋಟಿಸ್ ಹಿಡಿದು ಬಂದಿದ್ದ ಹಾಸನ ಸೈಬರ್ ಕ್ರೈಮ್‌ ಪೊಲೀಸರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನೋಟಿಸ್ ಸ್ವೀಕರಿಸದೇ ವಾಪಸ್ ಕಳಿಸಿದ್ದಾರೆ. ಬಳಿಕ ದೆಹಲಿಗೆ ತೆರಳಿದ್ದು, ಅಲ್ಲಿಂದಲೇ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನನಗೆ ನೋಟಿಸ್ ಕೊಟ್ಟು ಪ್ರಯೋಜನ ಇಲ್ಲ, ಪರಿಜ್ಞಾನ ಬೇಡ್ವಾ? ನನಗೇನು ನೋಟಿಸ್ ಕೊಡುತ್ತಾರೆ. ಅವಶ್ಯಕತೆ ಏನಿದೆ. ಜಿಲ್ಲಾಧಿಕಾರಿಯ ಪಿಎ ಮೊಬೈಲ್ ತೆಗೆದು ನೋಡಿದ್ರೆ ಮಾಹಿತಿ ಸಿಗುತ್ತೆ. ಇದೇ ಗೃಹ ಸಚಿವರು ನನ್ನ ಬಳಿ ಎಲ್ಲಾ ಮಾಹಿತಿ ಇದೆ ಅಂತಾರೆ. ಅಷ್ಟು ತಲೆ ಬೇಡ್ವಾ ನೋಟಿಸ್ ಕೊಡಲು, ಅದರ ಹೆಡ್ ಯಾರು ಹೇಳಿ? ಬುರುಡೆ ಹುಡ್ಕೊಂಡು ಹೋಗಿದ್ರಲ್ಲಾ ಧರ್ಮಸ್ಥಳದಲ್ಲಿ ಅವರೇ ಅಲ್ವಾ. ಈ ವಿಚಾರದಲ್ಲಿ ಮೊಬೈಲ್ ಸೀಜ್ ಮಾಡಿದ್ರೆ ಎಲ್ಲಾ ಮಾಹಿತಿ ಸಿಗುತ್ತೆ. ನನಗೆ ಬಂದ ಮಾಹಿತಿ ಕೊಟ್ಟಿದ್ದೀನಿ. ಯಾರೋ ಮುಸುಕುಧಾರಿ ಬಂದು ನನಗೆ ಮಾಹಿತಿ ಕೊಟ್ಟು ಹೋಗಿದ್ರು. ಅದಕ್ಕಾಗಿ ತನಿಖೆ ಮಾಡಿ ಅಂತ ಹೇಳಿದ್ದೆ ಅಷ್ಟೇ. ಅವರು ಕ್ಲೀನ್​ ಚಿಟ್ ಕೊಟ್ಟು ನಮ್ಮ ಬಳಿ ಕೇಳಿದ್ರೆ ಏನು ಪ್ರಯೋಜನ? ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ಇವರು ಏನು ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More