ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ದೇವಿ ಬಳಿ ಕೇಳಿದ್ದೇನು?
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಇಂದು(ಅಕ್ಟೋಬರ್ 27) ಹಾಸನಕ್ಕೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದುಕೊಂಡರು. ಈ ವೇಲೆ ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿನೆ ಮಾಡಿಕೊಂಡರು.
ಹಾಸನ, (ಅಕ್ಟೋಬರ್ 27): ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬೆ ದರ್ಶನವನ್ನು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪಡೆದುಕೊಂಡರು. ಇಂದು (ಅಕ್ಟೋಬರ್ 27) ಪತ್ನಿ ಅನಿತಾ, ಸೊಸೆ, ಮೊಮ್ಮಗನ ಜೊತೆ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು. ಈ ವೇಳೆ ವಿಶೇಷ ಪೂಜೆ ಸಲ್ಲಿಸಿ ಚನ್ನಪಟ್ಟಣದಲ್ಲಿ ಪುತ್ರನಿಗೆ ಗೆಲುವಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ , ಈ ಚುನಾವಣೆಯಲ್ಲಿ ನಿಖಿಲ್ಗೆ ಗೆಲುವು ಸಿಗಲೆಂದು ಪ್ರಾರ್ಥನೆ ಮಾಡಿದ್ದಾನೆ. ನನ್ನ ಮಗ ಎರಡು ಚುನಾವಣೆಯಲ್ಲಿ ಪರಾಜಯ ಗೊಂಡಿದ್ದಾನೆ. ಈ ಚುನಾವಣೆಯಲ್ಲಿ ನಿಖಿಲ್ಗೆ ಗೆಲುವು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಸಕಲ ರೀತಿಯ ವ್ಯವಸ್ಥೆ ಮಾಡಿದೆ. ತಾಯಿಯ ಪವಾಡವನ್ನು ಚಿಕ್ಕವರಿದ್ದಾಗನಿಂದಲೂ ಗಮನಿಸಿದ್ದೇವೆ. ಎಲ್ಲಾ ಕುಟುಂಬಕ್ಕೂ ತಾಯಿಯ ಅನುಗ್ರಹ ಸಿಗಲಿ . ನಮ್ಮ ಬಾಳಿನಲ್ಲಿ ಯಶಸ್ಸು ಕಾಣಲು ಭಗವಂತನ ಆಶೀರ್ವಾದಬೇಕು. ದುರ್ಗಾಮಾತೆ, ಚಾಮುಂಡೇಶ್ವರಿ ನಮ್ಮ ಬೇಡಿಕೆ ಅನುಗ್ರಹಿಸುತ್ತಾರೆ. ಜನರಿಗೆ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.