ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ದೇವಿ ಬಳಿ ಕೇಳಿದ್ದೇನು?

Edited By:

Updated on: Oct 27, 2024 | 1:20 PM

ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಇಂದು(ಅಕ್ಟೋಬರ್ 27) ಹಾಸನಕ್ಕೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದುಕೊಂಡರು. ಈ ವೇಲೆ ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿನೆ ಮಾಡಿಕೊಂಡರು.

ಹಾಸನ, (ಅಕ್ಟೋಬರ್ 27): ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬೆ ದರ್ಶನವನ್ನು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಪಡೆದುಕೊಂಡರು. ಇಂದು (ಅಕ್ಟೋಬರ್ 27) ಪತ್ನಿ ಅನಿತಾ, ಸೊಸೆ, ಮೊಮ್ಮಗನ ಜೊತೆ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು. ಈ ವೇಳೆ ವಿಶೇಷ ಪೂಜೆ ಸಲ್ಲಿಸಿ ಚನ್ನಪಟ್ಟಣದಲ್ಲಿ ಪುತ್ರನಿಗೆ ಗೆಲುವಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ , ಈ ಚುನಾವಣೆಯಲ್ಲಿ ನಿಖಿಲ್​ಗೆ ಗೆಲುವು ಸಿಗಲೆಂದು ಪ್ರಾರ್ಥನೆ ಮಾಡಿದ್ದಾನೆ. ನನ್ನ ಮಗ ಎರಡು ಚುನಾವಣೆಯಲ್ಲಿ ಪರಾಜಯ ಗೊಂಡಿದ್ದಾನೆ. ಈ ಚುನಾವಣೆಯಲ್ಲಿ ನಿಖಿಲ್​ಗೆ ಗೆಲುವು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಸಕಲ ರೀತಿಯ ವ್ಯವಸ್ಥೆ ಮಾಡಿದೆ. ತಾಯಿಯ ಪವಾಡವನ್ನು ಚಿಕ್ಕವರಿದ್ದಾಗನಿಂದಲೂ ಗಮನಿಸಿದ್ದೇವೆ. ಎಲ್ಲಾ ಕುಟುಂಬಕ್ಕೂ ತಾಯಿಯ ಅನುಗ್ರಹ ಸಿಗಲಿ . ನಮ್ಮ ಬಾಳಿನಲ್ಲಿ ಯಶಸ್ಸು ಕಾಣಲು ಭಗವಂತನ ಆಶೀರ್ವಾದಬೇಕು. ದುರ್ಗಾಮಾತೆ, ಚಾಮುಂಡೇಶ್ವರಿ ನಮ್ಮ ಬೇಡಿಕೆ ಅನುಗ್ರಹಿಸುತ್ತಾರೆ. ಜನರಿಗೆ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.

Loading...
Unable to load recommendations.
Follow Us
TV9 Web

TV9 Kannada

Read More