ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಹಾಲಿನ ಡೈರಿ ಬಳಿ ಇಟ್ಟಿದ್ದ ಕ್ರೇಟ್ನಿಂದ ಹೆಡ್ ಕಾನ್ಸಟೇಬಲ್ ಹಾಲನ್ನು ಕದಿರುವ ದೃಶ್ಯ ಸೆರೆಯಾಗಿದೆ. ಆಗಸ್ಟ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಹಾಲು ಕದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಪ್ಪಳ, ಸೆ.09: ಕಳ್ಳರನ್ನು ಹಿಡಿದು ಮಟ್ಟ ಹಾಕಬೇಕಿದ್ದ ಪೊಲೀಸಪ್ಪನೇ ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದಿರುವ (Milk Theft) ಘಟನೆ ಕೊಪ್ಪಳದಲ್ಲಿ ನಡೆದಿದೆ. ಪೊಲೀಸ್ ಹೆಡ್ ಕಾನ್ಸಟೇಬಲ್ (Police Head Constable) ಹಾಲು ಕದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಹಾಲಿನ ಡೈರಿ ಬಳಿ ಇಟ್ಟಿದ್ದ ಕ್ರೇಟ್ನಿಂದ ಹಾಲನ್ನು ಕದಿರುವ ದೃಶ್ಯ ಸೆರೆಯಾಗಿದೆ.
ಡಿವೈಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಹೆಡ್ ಕಾನ್ಸಟೇಬಲ್ ಶಿವಾನಂದ್ ಅವರು ಆಗಸ್ಟ್ 29 ರಂದು ರಾತ್ರಿ ಕರ್ತವ್ಯದ ವೇಳೆ ಹಾಲು ಕದ್ದಿದ್ದಾರೆ. ಆಗಸ್ಟ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಹಾಲು ಕದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ನಲ್ಲಿ ಬಂದ ಹೆಡ್ ಕಾನ್ಸಟೇಬಲ್ ಹಾಲಿನ ಡೈರಿ ಬಳಿ ಬೈಕ್ ನಿಲ್ಲಿಸಿ ಅತ್ತ ಇತ್ತ ಓಡಾಡಿ ಬಳಿಕ ಕ್ರೇಟ್ನಿಂದ ಅರ್ಥ ಲೀಟರ್ನ 2 ಪ್ಯಾಕೇಟ್ ಹಾಲು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಾಯುವವರೇ ಕಳ್ಳರಾದರೇ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನು ಯಾವುದೇ ದೂರು ದಾಖಲಾಗಿಲ್ಲ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ