ಮೈಸೂರಿನಲ್ಲಿ ಮಳೆ ರೌದ್ರಾವತಾರ! ಯುವ ದಸರಾ ಸ್ಥಗಿತ, ನೆಲಕ್ಕುರುಳಿದ ಸ್ಪೀಕರ್ ಟವರ್‌ಗಳು

Edited By:

Updated on: Oct 15, 2026 | 9:14 PM

ಮುಖ್ಯಾಂಶಗಳು

  • ಯುವ ದಸರಾ ಕಾರ್ಯಕ್ರಮಕ್ಕೆ ಮಳೆಯ ಕಾಟ
  • ಮಳೆಗೆ ಯುವ ದಸರಾ ನೋಡಲು ಬಂದ ಜನರು ತತ್ತರ
  • ಜೋರು ಮಳೆಗೆ ದಿಕ್ಕಾಪಾಲಾಗಿ ಓಡಿದ ಜನರು

ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಮಳೆ ಹಾಗೂ ಬಿರುಗಾಳಿ ಅಡ್ಡಿಪಡಿಸಿದೆ. ಸಿದ್ ಶ್ರೀರಾಮ್ ಸಂಗೀತ ರಸಸಂಜೆ ವೇಳೆ ಸುರಿದ ಭಾರಿ ಮಳೆಯಿಂದಾಗಿ ಕಾರ್ಯಕ್ರಮ ಸ್ಥಗಿತಗೊಂಡಿತು. ಗಾಳಿಗೆ ಸ್ಪೀಕರ್ ಟವರ್‌ಗಳು ನೆಲಕ್ಕುರುಳಿದ್ದು, ಸಹಸ್ರಾರು ಪ್ರೇಕ್ಷಕರು ಪರದಾಡಿದರು. ತೆರೆದ ಜಾಗದಲ್ಲಿ ಆಯೋಜಿಸಿದ್ದರಿಂದ ಮಳೆಯಿಂದ ಜನತೆಗೆ ತೀವ್ರ ತೊಂದರೆಯಾಗಿದ್ದು, ಕುರ್ಚಿಗಳಲ್ಲೇ ಆಶ್ರಯ ಪಡೆದರು.

ಮೈಸೂರು, ಅಕ್ಟೋಬರ್​​ 15: ನಗರದಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಯುವ ದಸರಾ ಕಾರ್ಯಕ್ರಮಕ್ಕೆ ಅಡ್ಡಿಯುಂಟಾದ ಘಟನೆ ನಡೆದಿದೆ. ಗಾಯಕ ಸಿದ್ ಶ್ರೀರಾಮ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಜೋರು ಮಳೆ ಸುರಿದಿದೆ. ಹೀಗಾಗಿ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಜನರು ತೊಂದರೆ ಅನುಭವಿಸಿದರು. ಜೋರು ಗಾಳಿಗೆ ವೇದಿಕೆಯ ಪಕ್ಕದಲ್ಲಿದ್ದ ಎರಡೂ ಸ್ಪೀಕರ್ ಟವರ್‌ಗಳು ನೆಲಕ್ಕುರುಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಯುವ ದಸರಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ. ಮುಕ್ತ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಮಳೆ ಮತ್ತು ಗಾಳಿಯ ಹೊಡೆತಕ್ಕೆ ಪ್ರೇಕ್ಷಕರು ಪರದಾಡಿದ್ದು, ಕೆಲವರು ಕುರ್ಚಿಗಳನ್ನೇ ಆಸರೆಯಾಗಿ ಹಿಡಿದುಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More