Raichur Rain: ಮಳೆ ನೀರು ನಿಂತು ಬಚ್ಚಲು ಮನೆಯಾದ ಸರ್ಕಾರಿ ಶಾಲೆ, ಸೋರುತ್ತಿರುವ ಕೊಠಡಿಯಲ್ಲೇ ಮಕ್ಕಳಿಗೆ ಬಿಸಿ ಊಟ ತಯಾರಿ
ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಪ್ರಾಣದ ಹಂಗು ತೊರೆದು ಶಿಥಿಲಗೊಂಡ, ಸೋರುತ್ತಿರುವ ಕೋಟೆಯಲ್ಲೇ ಅಡುಗೆ ಮಾಡುವಂತಹ ಪರಿಸ್ಥಿತಿ ಇದೆ.
ರಾಯಚೂರು, ಜುಲೈ 23: ಜಿಲ್ಲೆ ದೇವದುರ್ಗ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿದ್ದು ಶಿಥಿಲಗೊಂಡು ಸರ್ಕಾರಿ ಶಾಲೆ ಸೋರುತ್ತಿದೆ. ಮಳೆಯಿಂದ ಶಾಲೆ ಕೊಠಡಿ ಸೋರುತ್ತಿದ್ದು ಬಚ್ಚಲು ಮನೆಯಂತಾಗಿದೆ. ಸೋರುವ ಕೋಣೆಯಲ್ಲೇ ಮಕ್ಕಳಿಗೆ ಬಿಸಿಯೂಟ ತಯಾರಿಸಲಾಗುತ್ತಿದೆ. ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಪ್ರಾಣದ ಹಂಗು ತೊರೆದು ಶಿಥಿಲಗೊಂಡ, ಸೋರುತ್ತಿರುವ ಕೋಟೆಯಲ್ಲೇ ಅಡುಗೆ ಮಾಡುವಂತಹ ಪರಿಸ್ಥಿತಿ ಇದೆ.
ಕೆಲ ಕ್ಲಾಸ್ ರೂಂಗಳು ಕೂಡ ಶಿಥಿಲಗೊಂಡು ಸೋರುತ್ತಿವೆ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಶಾಲಾ ಶಿಕ್ಷಕರು, ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಸಮಸ್ಯೆ ಪರಿಹರಿಸದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ಅಡುಗೆ ಕೋಣೆ ಸೋರುತ್ತಿರುವ ವಿಡಿಯೋ ವೈರಲ್ ಆಗಿದೆ.
Latest Videos