Great Rescue : ಜಲಪಾತ ನೋಡಲು ಬಂದ ಪ್ರವಾಸಿಗನ ಜೀವಕ್ಕೆ ಜಲಗಂಡಾಂತರ; ಜಸ್ಟ್ ಮಿಸ್
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಅದರಂತೆ ಜಲಪಾತಗಳು ತುಂಬಿ ಹರಿಯುತ್ತಿದ್ದು, ನಿವೇನಾದರೂ ಜಲಪಾತಗಳನ್ನು ನೋಡಲು ಹೋಗುವುದಾದರೆ ಹುಷಾರಾಗಿರುವುದು ಒಳ್ಳೆಯದು.
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಅದರಂತೆ ಜಲಪಾತಗಳು ತುಂಬಿ ಹರಿಯುತ್ತಿದ್ದು, ನಿವೇನಾದರೂ ಜಲಪಾತ(Falls)ಗಳನ್ನು ನೋಡಲು ಹೋಗುವುದಾದರೆ ಹುಷಾರಾಗಿರುವುದು ಒಳ್ಳೆಯದು. ಹೌದು ಜಿಲ್ಲೆಯಲ್ಲಿರು ಮೂಕನಮನೆ ಜಲಪಾತವನ್ನ ವೀಕ್ಷಣೆ ಮಾಡಲು ಬಂದಿದ್ದ ಪ್ರವಾಸಿಗನೊಬ್ಬ ನೀರಿನಲ್ಲಿ ಸಿಲುಕಿದ್ದ, ಬಳಿಕ ಆತನನ್ನ ಪ್ರವಾಸಿ ಮಿತ್ರ ಪೊಲೀಸರು ರಕ್ಷಣೆ ಮಾಡಲಾಗಿರುವ ಘಟನೆ ನಡೆದಿದೆ. ಮಳೆಯಾಗುತ್ತಿರುವ ಹಿನ್ನಲೆ ಏಕಾಎಕಿ ಜಲಪಾತದ ನೀರಿನ ಹರಿವು ಹೆಚ್ಚಾಗಿದ್ದರಿಂದ ಪ್ರವಾಸಿಗನೊಬ್ಬ ನೀರಿನ ಮಧ್ಯೆ ಸಿಲುಕಿದ್ದ, ಕೂಡಲೇ ಆತನನ್ನ ಹಗ್ಗದ ಸಹಾಯದಿಂದ ರಕ್ಷಣೆ ಮಾಡಲಾಗಿದ್ದು, ಸ್ವಲ್ಪದರಲ್ಲೇ ಬದುಕುಳಿದಿದ್ದಾನೆ.
ಇನ್ನಷ್ಡು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ