ಹೆಬ್ಬಾಳ ವಿಸ್ತರಿತ ಫ್ಲೈಓವರ್ ಲೋಕಾರ್ಪಣೆಯಾದ್ರೂ ತಪ್ಪುತ್ತಿಲ್ಲ ಟ್ರಾಫಿಕ್ ಗೋಳು! ವೈರಲ್ ಆಯ್ತು ಡ್ರೋನ್ ವಿಡಿಯೋ

Updated on: Aug 25, 2025 | 11:25 AM

ಹೆಬ್ಬಾಳ ಫ್ಲೈಓವರ್ ಹೊಸ ಲೂಪ್ ಉದ್ಘಾಟನೆಯೊಂದಿಗೆ ಸಂಚಾರ ದಟ್ಟಣೆಗೆ ಬಹುತೇಕ ಮುಕ್ತಿ ಸಿಗಲಿದೆ ಎಂದು ಭಾವಿಸಿದ್ದವರಿಗೆ ನಿರಾಸೆ ಕಾದಿದೆ. ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆಯಾದ ನಂತರವೂ ಹೆಬ್ಬಾಳ ಜಂಕ್ಷನ್​​​ನಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಡ್ರೋನ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು, ಆಗಸ್ಟ್ 25: ಹೆಬ್ಬಾಳ ವಿಸ್ತರಿತ ಫ್ಲೈಓವರ್ ಆಗಸ್ಟ್ 18 ರಂದು ಲೋಕಾರ್ಪಣೆಯಾಯಿತು. ಅಲ್ಲದೆ, ಮುಂದಿನ ಮೂರು ತಿಂಗಳ ಒಳಗಾಗಿ ಮತ್ತೊಂದು ಲೂಪ್ ಕೂಡ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದರು. ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆಯೊಂದಿಗೆ ಆ ಭಾಗದಲ್ಲಿ ಸಂಚಾರ ದಟ್ಟಣೆಗೆ, ಟ್ರಾಫಿಕ್ ಜಾಮ್​ಗೆ ಮುಕ್ತಿ ಸಿಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮೇಲ್ಸೇತುವೆಯ ಹೊಸ ಲೂಪ್ ಸಂಚಾರಕ್ಕೆ ಮುಕ್ತವಾದರೂ ಹೆಬ್ಬಾಳ ಜಂಕ್ಷನ್​​ನಲ್ಲಿ ಪೀಕ್ ಅವರ್​​​ನಲ್ಲಿ ವಾಹನಗಳು ತೆವಳುತ್ತಾ ಸಾಗುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಬೆಂಗಳೂರಿನ ಏರಿಯಲ್ ಕಂಟೆಂಟ್ ಕ್ರಿಯೇಟರ್, ಡ್ರೋನ್ ಪೈಲಟ್ ಶ್ರೀಹರಿ ಕಾರಂತ್ (Srihari Karanth)ಎಂಬವರು ಹೆಬ್ಬಾಳ ಜಂಕ್ಷನ್ ಪ್ರದೇಶದ ಸಂಚಾರ ದಟ್ಟಣೆಯ ಡ್ರೋನ್ ವಿಡಿಯೋ ಮಾಡಿ ಎಕ್ಸ್ ತಾಣದಲ್ಲಿ ಅಪ್ಲೋಡ್ ಮಾಡಿದ್ದು, ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 25, 2025 11:24 AM