AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್​ಗಳಲ್ಲೂ ಇಂಡಕ್ಷನ್ ಸ್ಟವ್​ಗೆ ಸಖತ್ ಡಿಮಾಂಡ್: ಪೀಣ್ಯ ಇಂಡಸ್ಟ್ರೀಲಿ ಉತ್ಪಾದನೆ ಹೆಚ್ಚಳ, ಸಿಬ್ಬಂದಿಗೆ ಓವರ್ ಟೈಂ ಡ್ಯೂಟಿ!

ಹೋಟೆಲ್​ಗಳಲ್ಲೂ ಇಂಡಕ್ಷನ್ ಸ್ಟವ್​ಗೆ ಸಖತ್ ಡಿಮಾಂಡ್: ಪೀಣ್ಯ ಇಂಡಸ್ಟ್ರೀಲಿ ಉತ್ಪಾದನೆ ಹೆಚ್ಚಳ, ಸಿಬ್ಬಂದಿಗೆ ಓವರ್ ಟೈಂ ಡ್ಯೂಟಿ!

ಗಣಪತಿ ಶರ್ಮಾ
|

Updated on:Apr 07, 2026 | 12:47 PM

Share

ವಾಣಿಜ್ಯ ಗ್ಯಾಸ್ ಕೊರತೆಯಿಂದಾಗಿ ಇಂಡಕ್ಷನ್ ಸ್ಟವ್‌ಗಳ ಬೇಡಿಕೆ ವ್ಯಾಪಕವಾಗಿ ಹೆಚ್ಚಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮನೆಗಳಲ್ಲಿಯೂ ಇಂಡಕ್ಷನ್ ಸ್ಟವ್‌ಗಳ ಬಳಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಪೂರೈಸಲು ಪೀಣ್ಯ ಇಂಡಸ್ಟ್ರೀಯಲ್ಲಿ ತಯಾರಕರು ಪರದಾಡುತ್ತಿದ್ದು, ಕಾರ್ಮಿಕರ ಕೊರತೆಯಿಂದಾಗಿ ಶಿಫ್ಟ್‌ಗಳನ್ನು ಹೆಚ್ಚಿಸಿ, ಓವರ್‌ಟೈಮ್ ಮಾಡಿಸುವ ಮೂಲಕ ಬೇಡಿಕೆ ನೀಗಿಸಲು ಪ್ರಯತ್ನಿಸುತ್ತಿದ್ದಾರೆ.

ಬೆಂಗಳೂರು, ಏಪ್ರಿಲ್ 7: ಇಸ್ರೇಲ್, ಇರಾನ್, ಅಮೆರಿಕ ಸೇನಾ ಸಂಘರ್ಷದ ನಂತರ ಉಂಟಾದ ಗ್ಯಾಸ್ ಕೊರತೆಯಿಂದಾಗಿ, ವಾಣಿಜ್ಯ ಮತ್ತು ಗೃಹಬಳಕೆಯ ಇಂಡಕ್ಷನ್ ಸ್ಟವ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ದಿನಕ್ಕೆ ಕೇವಲ 40 ವಾಣಿಜ್ಯ ಇಂಡಕ್ಷನ್ ಸ್ಟವ್‌ಗಳಿಗೆ ಬೇಡಿಕೆ ಇದ್ದರೆ, ಈಗ ಅದು 200ಕ್ಕೆ ಏರಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸ್ಟಾರ್ ಹೋಟೆಲ್‌ಗಳು ಗ್ಯಾಸ್‌ಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಇಂಡಕ್ಷನ್ ಒಲೆಗಳತ್ತ ಮುಖ ಮಾಡಿವೆ. ಪೀಣ್ಯ ಇಂಡಸ್ಟ್ರಿಯಲ್ಲಿ ತಯಾರಕರು ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಮಿಕರ ಕೊರತೆಯ ನಡುವೆಯೂ ಉತ್ಪಾದನೆಯನ್ನು ಹೆಚ್ಚಿಸಲು ಶಿಫ್ಟ್‌ಗಳನ್ನು ವಿಸ್ತರಿಸಲಾಗುತ್ತಿದೆ. ಗೃಹಬಳಕೆದಾರರಲ್ಲಿಯೂ ಇಂಡಕ್ಷನ್ ಸ್ಟವ್‌ಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹಿಂದೆ ದಿನಕ್ಕೆ ಒಂದು ಅಥವಾ ಎರಡು ಸ್ಟವ್‌ಗಳು ಮಾರಾಟವಾಗುತ್ತಿದ್ದರೆ, ಈಗ ಅದು 15-20ಕ್ಕೆ ಏರಿದೆ. ಪೂರೈಕೆ ಕೊರತೆಯಿಂದಾಗಿ ಗ್ರಾಹಕರಿಗೆ ಬೇಕಾದ ಎಲ್ಲಾ ಮಾಡೆಲ್‌ಗಳು ಲಭ್ಯವಾಗುತ್ತಿಲ್ಲ. ಕಂಪನಿಗಳಿಂದ ಸ್ಟಾಕ್ ಪಡೆಯುವುದು ಕೂಡ ಮಾರಾಟಗಾರರಿಗೆ ಸವಾಲಾಗಿದೆ.

ವರದಿ: ಈರಣ್ಣ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 07, 2026 12:46 PM
Follow Us