ತಿರುಪತಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ; ಅನ್ಲಾಕ್ ನಂತರ ತಿಮ್ಮಪ್ಪನ ಸನ್ನಿಧಿಗೆ ಹರಿದುಬಂತು ಭಕ್ತಸಾಗರ
ಸದ್ಯ ಲಾಕ್ಡೌನ್ ಸಡಿಲಿಕೆಯಾದ ನಂತರದಲ್ಲಿ ಧಾರ್ಮಿಕ ಕ್ಷೇತ್ರಗಳತ್ತ ಭಕ್ತಾದಿಗಳ ಪ್ರವಾಸ ಹೆಚ್ಚಾಗಿದೆ. ಅನ್ಲಾಕ್ ನಂತರ ಜನರು ದೇವರ ಸನ್ನಿಧಿಗೆ ಧಾವಿಸುತ್ತಿರುವುದರಿಂದ ದೇವಾಲಯಗಳ ಆದಾಯವೂ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ದೇವಾಲಯವಾದ ತಿರುಪತಿ ಕೂಡ ಇದೇ ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಒಂದೇ ದಿನದಲ್ಲಿ ತಿರುಮಲದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಕಳೆದ ಒಂದೂವರೆ ವರ್ಷದಿಂದ ಕೊರೊನಾ ಕಾರಣಕ್ಕಾಗಿ ಭಾರತ ಸೇರಿದಂತೆ ಜಗತ್ತಿನ ಅನೇಕ ಕಡೆಗಳಲ್ಲಿ ಪ್ರವಾಸೋದ್ಯ ಕ್ಷೇತ್ರ ಭಾರೀ ಹೊಡೆತವನ್ನು ಅನುಭವಿಸಿದೆ. ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿಯಮಾವಳಿಗಳು ಕಠಿಣವಾಗಿದ್ದ ಕಾರಣ ಜನರು ಮನೆಯಿಂದ ಹೊರಬರದೇ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದಾಗಿ ಪ್ರವಾಸಿ ಕ್ಷೇತ್ರಗಳು ಭಣಗುಡುತ್ತಿದ್ದವು. ಭಾರತದಲ್ಲಂತೂ ಮೋಜು ಮಸ್ತಿಗೆ ಪ್ರವಾಸಿ ತಾಣಗಳಿಗೆ ಹೋಗುವವರಿಗಿಂತ ತುಸು ಹೆಚ್ಚೇ ಜನ ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಾರೆ. ಆದರೆ, ಕೊರೊನಾದಿಂದ ದೇವಸ್ಥಾನಗಳೂ ಬಾಗಿಲು ಹಾಕಿದ ಕಾರಣ ಅಲ್ಲಿಗೂ ಪ್ರವೇಶವಿರಲಿಲ್ಲ.
ಸದ್ಯ ಲಾಕ್ಡೌನ್ ಸಡಿಲಿಕೆಯಾದ ನಂತರದಲ್ಲಿ ಧಾರ್ಮಿಕ ಕ್ಷೇತ್ರಗಳತ್ತ ಭಕ್ತಾದಿಗಳ ಪ್ರವಾಸ ಹೆಚ್ಚಾಗಿದೆ. ಅನ್ಲಾಕ್ ನಂತರ ಜನರು ದೇವರ ಸನ್ನಿಧಿಗೆ ಧಾವಿಸುತ್ತಿರುವುದರಿಂದ ದೇವಾಲಯಗಳ ಆದಾಯವೂ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ದೇವಾಲಯವಾದ ತಿರುಪತಿ ಕೂಡ ಇದೇ ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಒಂದೇ ದಿನದಲ್ಲಿ ತಿರುಮಲದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ದಾಖಲೆ ಪ್ರಮಾಣವೆಂದರೆ ಎಷ್ಟಿರಬಹುದು ಎನ್ನುವುದನ್ನು ತಿಳಿಯಲು ಮೇಲಿನ ವಿಡಿಯೋ ನೋಡಿ.
ಇದನ್ನೂ ಓದಿ:
Bengaluru- Tirupati: ಬೆಂಗಳೂರಿನಿಂದ ತಿರುಪತಿಗೆ ಪ್ಯಾಕೇಜ್ ಟೂರ್ ಹೋಗಲು ಕೆಎಸ್ಆರ್ಟಿಸಿ ಬಸ್ ಸೇವೆಯ ಮಾಹಿತಿ ಇಲ್ಲಿದೆ