ಉಡುಪಿಯಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಬಂದಿದ್ದ ಸ್ಟೂಡೆಂಟ್ಸ್ಗೆ ನೋ ಎಂಟ್ರಿ
ಉಡುಪಿಯಲ್ಲಿ ಹಿಜಾಬ್ (hijab) ವಿವಾದ ಮತ್ತೆ ತಾರಕಕ್ಕೇರಿದೆ. ಉಡುಪಿಯ ಕುಂದಾಪುರ ಭಂಡಾರ್ಕರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ.
ಉಡುಪಿ: ಉಡುಪಿಯಲ್ಲಿ ಹಿಜಾಬ್ (hijab) ವಿವಾದ ಮತ್ತೆ ತಾರಕಕ್ಕೇರಿದೆ. ಉಡುಪಿಯ ಕುಂದಾಪುರ ಭಂಡಾರ್ಕರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆಯಲಾಗಿದೆ. ಅದೇ ರೀತಿಯಾಗಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕೇಸರಿ ಶಾಲು ಧರಿಸಿ ಬಂದಿದ್ದ ಸ್ಟೂಡೆಂಟ್ಸ್ಗೂ ಕಾಲೇಜ ಆಡಳಿತ ಮಂಡಳಿ ನೋ ಎಂಟ್ರಿ ಎಂದಿದೆ. ಇದೇ ವಿಚಾರವಾಗಿ ಕಾಲೇಜು ವಿದ್ಯಾರ್ಥಿನಿಯರನ್ನು ಪ್ರಿನ್ಸಿಪಾಲ್ ತಡೆದು ನಿಲ್ಲಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ಕುರಿತು ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿಕೆ ನೀಡಿದ್ದಾರೆ. ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ಮಾಡಲು ಸಾಧ್ಯವಿಲ್ಲ. ತಮಗೆ ಬೇಕಾದಂತೆ ಕಾಲೇಜಿಗೆ ಬರಲು ಅವಕಾಶವಿಲ್ಲ. ಸಮವಸ್ತ್ರ ಸಂಬಂಧ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಜಿಲ್ಲಾಡಳಿತದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ;
ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡಿದರು ಬಿ ಸಿ ಪಾಟೀಲ