ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿಯಲ್ಲಿ ಸಂಭವಿಸಿದ ಭೀಕರ ತೀವ್ರ ಸ್ಫೋಟದ ನಂತರ ಆ ಪ್ರದೇಶದಲ್ಲಿ ಭೀತಿ ಮತ್ತು ಅವ್ಯವಸ್ಥೆಗೆ ಕಾರಣವಾದ ಗಾಯಾಳುಗಳನ್ನು ಗೃಹ ಸಚಿವರು ಭೇಟಿಯಾದರು. ದೆಹಲಿ ಪೊಲೀಸ್ ಆಯುಕ್ತರು ಸಹ ಆಸ್ಪತ್ರೆಯಲ್ಲಿ ಹಾಜರಿದ್ದರು. ಇಂದು ರಾತ್ರಿ ಗಾಯಗೊಂಡವರನ್ನು ಭೇಟಿಯಾದ ನಂತರ, ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನವದೆಹಲಿ, ನವೆಂಬರ್ 10: ಕೆಂಪು ಕೋಟೆ ಬಳಿ ಇಂದು ಸಂಜೆ ನಡೆದ ಕಾರಿನ ಸ್ಫೋಟ ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿಬೀಳಿಸಿದೆ. ಕೆಂಪು ಕೋಟೆ (Red Fort) ಬಳಿ ಇರುವ ಮೆಟ್ರೋ ನಿಲ್ದಾಣದ ಗೇಟ್ ಬಳಿ ಸಂಭವಿಸಿದ ಈ ಭೀಕರ ಸ್ಫೋಟದ (Delhi Car Blast) ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ. ಹಾಗೇ, ಲೋಕ ನಾಯಕ್ ಜಯ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ತೆರಳಿ ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿಯಾಗಿದ್ದಾರೆ.
ಇಂದು ರಾತ್ರಿ ಗಾಯಗೊಂಡವರನ್ನು ಭೇಟಿಯಾದ ನಂತರ, ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸದ್ಯಕ್ಕೆ ನಡೆಯುತ್ತಿರುವ ತನಿಖೆ ಮತ್ತು ಸ್ಥಳದಲ್ಲಿನ ಭದ್ರತಾ ಕ್ರಮಗಳ ಬಗ್ಗೆ ಅವರು ವಿವರಿಸಿದ್ದಾರೆ. ಹಾಗೇ, ಅವರು ವೈದ್ಯರ ತಂಡದೊಂದಿಗೆ ಕೂಡ ಸಭೆ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

