Loading video

ಹೈಕಮಾಂಡ್ ಎಚ್ಚರಿಕೆಯನ್ನು ಉಲ್ಲಂಘಿಸಿದ ಯತೀಂದ್ರ ಬಗ್ಗೆ ಪರಮೇಶ್ವರ್ ನೋ ಕಾಮೆಂಟ್ಸ್​ ಎಂದರು!

Updated on: Jan 31, 2025 | 12:29 PM

ತಾನು ದಲಿತ ಸಮುದಾಯದ ಸಭೆಯನ್ನು ನಡೆಸುವ ಗೋಜಿಗೆ ಹೋಗಿಲ್ಲ, ನಿನ್ನೆ ಸಂಪುಟ ಸಭೆಯ ನಂತರ ಎಸ್ ಟಿ ಸಮುದಾಯದ ರಾಜನಹಳ್ಳಿ ಸ್ವಾಮೀಜಿಯವರು ಜಾತ್ರೆಗೆ ಆಹ್ವಾನಿಸಲು ತಮ್ಮ ಚೇಂಬರ್​ಗೆ ಬಂದಿದ್ದರು, ಅವರು ಬಂದಿರುವ ವಿಷಯ ಗೊತ್ತಾಗಿ ಸಚಿವರಾದ ಕೆಎನ್ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಸಹ ಅಲ್ಲಿಗೆ ಬಂದು ಶ್ರೀಗಳ ಆಶೀರ್ವಾದ ಪಡೆದರು ಎಂದು ಸಚಿವ ಹೇಳಿದರು.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತಾಡಬೇಡವೆಂದು ಹೈಕಮಾಂಡ್ ಹೇಳಿದ್ದರೂ ಯತೀಂದ್ರ ಸಿದ್ದರಾಮಯ್ಯ ಮಾತಾಡಿರುವುದನ್ನು ಜಿ ಪರಮೇಶ್ವರ್ ಗಮನಕ್ಕೆ ತಂದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾಲ್ವರು ವಿಧಾನ ಪರಿಷತ್ ಸದಸ್ಯರನ್ನು ನಾಮಾಂಕಿತ ಮಾಡುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಹೆಸರುಗಳನ್ನು ಅಂತಿಮಗೊಳಿಸುವ ಅಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಯವರಿಗೆ ನೀಡಿದೆ, ಅವರೇ ಸದಸ್ಯರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. ವಿಧಾನ ಪರಿಷತ್​ಗೆ ಸದಸ್ಯರ ಆಯ್ಕೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲ ವಿಧಾನಗಳಿವೆ, ಅವುಗಳ ಆಧಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತ್ಯಾಗದ ಮನೋಭಾವ ಸಮಾಜದಲ್ಲಿ ಕಡಿಮೆಯಾಗಿದೆ, ಕೇವಲ ಕಾಂಗ್ರೆಸ್ಸಿಗರಲ್ಲಿ ಮಾತ್ರ ಅಲ್ಲ: ಪರಮೇಶ್ವರ್