ಸಿಟಿ ರವಿ ಬಂಧನದ ಬಗ್ಗೆ ಪ್ರಶ್ನೆ ಕೇಳಿದಾಗ ಗೃಹ ಸಚಿವ ಪರಮೇಶ್ವರ್ ಪ್ರಕರಣ ಕೋರ್ಟ್ ಮುಂದಿದೆ ಎಂದರು!
ಸಿಟಿ ರವಿಯವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿದರು ಎನ್ನಲಾಗಿರುವ ಅರೋಪಿತ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತಾ ಅಥವಾ ಸದನವನ್ನು ಸಭಾಪತಿಗಳು ಮುಂದೂಡಿದ ಬಳಿಕ ಹೊರಭಾಗದಲ್ಲಿ ನಡೆಯಿತೋ ಅನ್ನೋದು ಇನ್ನೂ ಖಚಿತಪಟ್ಟಿಲ್ಲ, ಕೆಲವರು ಸದನದ ಒಳಗಡೆ ನಡೆಯಿತು ಎನ್ನುತ್ತಾರೆ , ಕೆಲವರು ಹೊರಗಡೆ ಅನ್ನುತ್ತಾರೆ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ಸರ್ಕಾರ ಬ್ಯಾಕ್ಫುಟ್ನಲ್ಲಿದ್ದಾಗ ರಕ್ಷಣೆಗಾಗಿ ಅದರ ಪ್ರತಿನಿಧಿಗಳಿಗೆ ಸಿಗುವ ಅಸ್ತ್ರವೆಂದರೆ, ಪ್ರಕರಣ ಕೋರ್ಟ್ ಮುಂದಿದೆ, ಹಾಗಾಗಿ ಪ್ರತಿಕ್ರಿಯೆ ನೀಡಲಾಗಲ್ಲ ಅಂತ ಹೇಳಿ ಜಾರಿಕೊಳ್ಳೋದು. ಇವತ್ತು ನಗರದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಸಿಟಿ ರವಿ ಬಂಧನ ಮತ್ತು ಹಲ್ಲೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ ಅವರಲ್ಲಿ ಉತ್ತರವಿರಲಿಲ್ಲ. ಈಗ ವಿಷಯ ನ್ಯಾಯಲಯದ ಮುಂದಿರುವುದರಿಂದ ಚರ್ಚೆ ಮಾಡೋದು ಸರಿಯಲ್ಲ ಎಂದು ಹೇಳಿದರು. ರವಿ ಅವರ ಬಿಡುಗಡೆ ಕೋರ್ಟ್ ತೆಗೆದುಕೊಂಡಿರುವ ತೀರ್ಮಾನ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿ ಬಂಧನ; ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲಾಗಲ್ಲ: ಜಿ ಪರಮೇಶ್ವರ್