ತುಮಕೂರು ಬಸ್ ನಿಲ್ದಾಣದ ಕ್ಯಾಂಟೀನಲ್ಲಿ ಗ್ರಾಹಕರಿಗೆ ಸರ್ವ್ ಮಾಡಿದ ಸಚಿವ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2025 | 2:45 PM

ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಕ್ಯಾಂಟೀನಲ್ಲಿ ಬೋಂಡ ಮತ್ತು ಟೀ ಸವಿದ ಬಳಿಕ ನಗರದ ಆಟೋರಿಕ್ಷಾ ಚಾಲಕರ ಜೊತೆ ಮಾತುಕತೆ ನಡೆಸಿದರು. ಆಟೋಚಾಲಕರ ಮೇಲೆ ಸುಖಾಸುಮ್ಮನೆ ದಂಡ ವಿಧಿಸಬಾರದು ಅಂತ ಪೊಲೀಸರಿಗೆ ಸೂಚನೆ ನೀಡಿದ ಪರಮೇಶ್ವರ್ ಬಸ್ ನಿಲ್ದಾಣ ಬಳಿಯ ಆಟೋ ಸ್ಟ್ಯಾಂಡ್ ಅನ್ನು ವಿಸ್ತರಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದರು.

ತುಮಕೂರು, ಜುಲೈ 14: ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಸಿದ್ದಾರ್ಥ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರದಿದ್ದರೆ ಮತ್ತು ರಾಜಕಾರಣಿಯಾಗಿರದಿದ್ದರೆ ನಿಸ್ಸಂದೇಹವಾಗಿ ಹೋಟೆಲ್ ಉದ್ಯಾಮಿಯಾಗಿರುತ್ತಿದ್ದರು ಎಂದು ವಿಡಿಯೋ ನೋಡಿದವರಿಗೆ ಅನಿಸಬಹುದು. ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿರುವ ಸಸ್ಯಾಹಾರಿ ಉಪಹಾರ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿ ಹೋಟೆಲ್ ಮಾಲೀಕ ಮತ್ತು ಮ್ಯಾನೇಜರೊಂದಿಗೆ ಆತ್ಮೀಯವಾಗಿ ಮಾತಾಡಿದ ಬಳಿಕ ಅವರು ತಿಂಡಿ ತಿನ್ನಲು ಬಂದ ಗ್ರಾಹಕರಲ್ಲಿ ಕೆಲವರಿಗೆ ತಾವೇ ತಿಂಡಿಗಳನ್ನು ತಟ್ಟೆಗೆ ಹಾಕಿಕೊಟ್ಟರು. ರಾಜ್ಯದ ಗೃಹ ಸಚಿವನಿಂದ ಸರ್ವ್ ಮಾಡಿಸಿಕೊಂಡ ಗ್ರಾಹಕರೇ ಅದೃಷ್ಟವಂತರು!

ಇದನ್ನೂ ಓದಿ:   ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಣ್ಣನತ್ರ ದುಡ್ಡಿಲ್ಲ: ಗೃಹ ಸಚಿವ ಪರಮೇಶ್ವರ್ ಶಾಕಿಂಗ್ ಹೇಳಿಕೆ, ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.